Saturday, March 25, 2023

Latest Posts

ಪ್ರಧಾನಿ ಮೋದಿ ಸಿಖ್‌ರಿಗೆ ಮತ್ತು ಸಿಖ್ ಧರ್ಮಕ್ಕಾಗಿ ಬಹಳಷ್ಟು ಸಹಾಯ ಮಾಡಿದ್ದಾರೆ: ಮಾಜಿ ಖಲಿಸ್ತಾನಿ ನಾಯಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ದೇಶದಲ್ಲಿ ಸಿಖ್‌ ಧರ್ಮ ಮತ್ತು ಸಿಖ್‌ರ ಶ್ರೆಯೋಭಿವೃದ್ಧಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ದಲ್‌ ಖಾಲ್ಸಾ ಸಂಸ್ಥಾಪಕ ಹಾಗೂ ಮಾಜಿ ಖಲಿಸ್ತಾನಿ ಹೋರಾಟಗಾರ ಜಸ್ವಂತ್‌ ಸಿಂಗ್‌ ಟೇಖೇದಾರ್‌ ಹೇಳಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಿಖ್ ಸಮುದಾಯದ ಸದಸ್ಯರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಕೆಲಸ ಮಾಡಿದೆ ಎಂದು ಅವರು ತಿಳಿಸಿದರು.

ಇದಕ್ಕೂ ಮುನ್ನ ಸಿಖ್ ಸಮುದಾಯದ ಕಲ್ಯಾಣಕ್ಕಾಗಿ ಕ್ರಮಗಳನ್ನು ಕೈಗೊಂಡಿದ್ದಕ್ಕಾಗಿ ಮತ್ತು ವಿಶೇಷವಾಗಿ ಪ್ರತಿ ವರ್ಷ ಡಿಸೆಂಬರ್ 26 ಅನ್ನು ವೀರ್ ಬಾಲ್ ದಿವಸ್ ಎಂದು ಘೋಷಿಸುವ ನಿರ್ಧಾರದ ಮೂಲಕ ಚಾರ್ ಸಾಹಿಬ್ಜಾದೆ ಅವರನ್ನು ಗೌರವಿಸಿದ್ದಕ್ಕಾಗಿ ನಿಯೋಗವು ಪ್ರಧಾನ ಮಂತ್ರಿಗೆ ಧನ್ಯವಾದಗಳನ್ನು ಅರ್ಪಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!