July 11, 2026
Saturday, July 11, 2026
spot_img

ಬಡ ಕುಟುಂಬಗಳನ್ನು ಮತ್ತೆ ಸೌದೆ ಒಲೆ ಜಮಾನಕ್ಕೆ ತಳ್ತಿದ್ದಾರೆ: ರಾಗಾ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅನ್ವಯ ಸಬ್ಸಿಡಿ ಹೊಂದಿರುವ ಎಲ್‌ಪಿಜಿ ಸಿಲಿಂಡರ್‌ಗಳ ವಾರ್ಷಿಕ ಕೋಟಾವನ್ನು ಒಂಬತ್ತರಿಂದ ನಾಲ್ಕಕ್ಕೆ ಇಳಿಸುವ ನಿರ್ಧಾರ ಸರಿಯಿಲ್ಲ. ಬಡ ಕುಟುಂಬಗಳನ್ನು ಸೌದೆ ಒಲೆಯ ಜಮಾನದತ್ತ ಕಳಿಸಲಾಗುತ್ತಿದೆ ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ಹನ್ನೆರಡು ವರ್ಷಗಳ ಬಡವರ ವಿರೋಧಿ ಆರ್ಥಿಕ ನೀತಿಗಳು ಮತ್ತು ರಾಜಿ ಮಾಡಿಕೊಂಡ ವಿದೇಶಾಂಗ ನೀತಿಯು ದೇಶವನ್ನು ಲಕ್ಷಾಂತರ ಬಡ ಕುಟುಂಬಗಳು ಮತ್ತು ಮಹಿಳೆಯರನ್ನು ವಿಷಕಾರಿ ಸೌಧೆ ಒಲೆಯತ್ತ ತಳ್ತಿದ್ದಾರೆ. ಉಜ್ವಲ ಯೋಜನೆಯಡಿಯಲ್ಲಿ ಸಬ್ಸಿಡಿ ಹೊಂದಿರುವ ಸಿಲಿಂಡರ್‌ಗಳ ಸಂಖ್ಯೆಯನ್ನು ಒಂಬತ್ತರಿಂದ ನಾಲ್ಕಕ್ಕೆ ಇಳಿಸಲಾಗಿದೆ ಮತ್ತು ಕಳೆದ ಮೂರು ತಿಂಗಳಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ರೂ.89 ರಷ್ಟು ಹೆಚ್ಚಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈಗಿರುವ ಸರ್ಕಾರ ಶ್ರೀಮಂತರ ಪರವಾಗಿದೆ. ಬಡವರಿಗೆ ಇವರ ನಡೆ ಹೊರೆಯಾಗಿ ಪರಿಣಮಿಸಿದೆ. ಶ್ರೀಮಂತರಿಗೆ ಈ ಸರ್ಕಾರದಿಂದ ಏನು ಸಮಸ್ಯೆಯಾಗಿದೆ ಹೇಳಿ? ಬಡವರು, ಕಾರ್ಮಿಕರು, ರೈತರು, ಮಹಿಳೆಯರು ಹಾಗೂ ಮಧ್ಯಮ ವರ್ಗದವರ ಕಡೆ ತಿರುಗಿ ನೋಡೋರಿಲ್ಲ. ಎಲ್ಲದರ ಬೆಲೆ ಹೆಚ್ಚಾಗುತ್ತಾ ಹೋದರೆ ಅವರು ಹೇಗೆ ನಿಭಾಯಿಸ್ತಾರೆ? ಏನೇ ನಿರ್ಧಾರ ತಗೊಳೋದಾದ್ರೂ ಇವರನ್ನು ಮೊದಲು ಗಮನದಲ್ಲಿ ಇಡಬೇಕು. ಬರೀ ಬಾಯಿ ಮಾತಿನಲ್ಲಿ ಏನೂ ಸಾಧ್ಯವಾಗೋದಿಲ್ಲ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !