July 16, 2026
Thursday, July 16, 2026
spot_img

ಫೇಸ್‌ಬುಕ್, ಇನ್‌ಸ್ಟಾದಲ್ಲಿ ಅಶ್ಲೀಲ ಕಮೆಂಟ್ ಮಾಡ್ತೀರಾ?: 3 ವರ್ಷ ಜೈಲು, 1 ಲಕ್ಷ ರೂ. ದಂಡ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಕಮೆಂಟ್‌ಗಳನ್ನು ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಹೊಸ ಕಾನೂನನ್ನು ಜಾರಿಗೆ ತರಲಾಗಿದೆ. ಡಿಜಿಟಲ್ ಜಗತ್ತಿನಲ್ಲಿ ಸಭ್ಯತೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಏನಿದು ಹೊಸ ಐಟಿ ನಿಯಮ?

2024ರ ಜುಲೈ 1ರಿಂದ ಜಾರಿಗೆ ಬಂದಿರುವ ಹೊಸ ಐಟಿ (IT) ಕಾಯ್ದೆಗಳ ಅನ್ವಯ, ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡುವವರಿಗೆ ಬಿಗಿ ಪೆನಾಲ್ಟಿ ವಿಧಿಸಲಾಗುತ್ತದೆ. ಈ ನಿಯಮಗಳ ಪ್ರಕಾರ, ತಪ್ಪು ಸಾಬೀತಾದರೆ 6 ತಿಂಗಳಿಂದ 1 ವರ್ಷದವರೆಗೆ ಜೈಲು ಶಿಕ್ಷೆ ಗ್ಯಾರಂಟಿ.

ಜಾಮೀನು ಸಿಗುವುದು ಕಷ್ಟ!

ಈ ಕಾಯ್ದೆಯ ಅಡಿಯಲ್ಲಿ ಬಂಧನಕ್ಕೊಳಗಾದವರಿಗೆ ಸುಲಭವಾಗಿ ಬೇಲ್ ಸಿಗುವುದಿಲ್ಲ. 1 ವರ್ಷದವರೆಗೆ ಜಾಮೀನು ರಹಿತ ಕಠಿಣ ನಿಯಮವನ್ನು ಅನ್ವಯಿಸಲಾಗುತ್ತದೆ. ಆರೋಪಿಗಳು ಸೆಷನ್ಸ್ ಕೋರ್ಟ್‌ನಿಂದ ಹೈಕೋರ್ಟ್ ಮೆಟ್ಟಿಲೇರಿದರೂ ತಕ್ಷಣಕ್ಕೆ ಜಾಮೀನು ಪಡೆಯಲು ಸಾಧ್ಯವಿರುವುದಿಲ್ಲ.

ದಂಡ ಮತ್ತು ಕಠಿಣ ಶಿಕ್ಷೆಯ ವಿವರ

ಸೋಷಿಯಲ್ ಮೀಡಿಯಾ ಕಿಡಿಗೇಡಿಗಳನ್ನು ಮಟ್ಟಹಾಕಲು ಎರಡು ಪ್ರಮುಖ ಸೆಕ್ಷನ್‌ಗಳನ್ನು ಜಾರಿಗೊಳಿಸಲಾಗಿದೆ:

  • ಕನಿಷ್ಠ 3 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ನಿಗದಿತ ದಂಡದ ಮೊತ್ತವನ್ನು ಪಾವತಿಸದಿದ್ದರೆ, ಅಲ್ಲಿಯವರೆಗೆ ಜೈಲು ವಾಸವನ್ನು ಕಡ್ಡಾಯವಾಗಿ ವಿಸ್ತರಿಸಲಾಗುತ್ತದೆ.

ನೆನಪಿಡಿ, ಜಾಲತಾಣಗಳಲ್ಲಿ ನಿಮ್ಮ ಒಂದು ತಪ್ಪು ಕಮೆಂಟ್ ನಿಮ್ಮನ್ನು ನೇರವಾಗಿ ಕಂಬಿ ಹಿಂದೆ ತಳ್ಳಬಹುದು!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !