ದಿನಭವಿಷ್ಯ: ಆರ್ಥಿಕವಾಗಿ ಉತ್ತಮ ದಿನ, ಇಂದು ಉಳಿತಾಯ ಕೂಡ ಮಾಡಬಹುದು!

ಮೇಷ
ನಿಮ್ಮ ಹೊಣೆಯನ್ನು ಸಮರ್ಥವಾಗಿ, ಕ್ಷಿಪ್ರವಾಗಿ ನಿಭಾಯಿಸುವಿರಿ. ಹಾಗಾಗಿ ಯಾವುದೇ ಸಮಸ್ಯೆ ಉದ್ಭವಿಸದು. ಸಾಂಸಾರಿಕ ಶಾಂತಿ.

ವೃಷಭ
ಮಾನಸಿಕ ಒತ್ತಡ. ಇದರಿಂದಾಗಿ ಕೆಲಸದಲ್ಲಿ ಏಕಾಗ್ರತೆ ಕಡಿಮೆಯಾಗ ಬಹುದು. ಸಂಗಾತಿಯ ಜತೆಗೆ ಭಿನ್ನಮತ ಉಂಟಾಗಬಹುದು. ಸಹನೆಯಿರಲಿ.

ಮಿಥುನ
ಹೆಚ್ಚಿನ ವಿಶೇಷಗಳಿಲ್ಲದ ದಿನ. ಕೌಟುಂಬಿಕ ಹೊಣೆಗಾರಿಕೆ ತುಸು ಹೆಚ್ಚಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸು ವುದು. ದೈಹಿಕ ಸಮಸ್ಯೆ ನಿವಾರಣೆ.

ಕಟಕ
ವೃತ್ತಿಪರ ಒತ್ತಡಗಳು. ಮಾಡಿದ ಕೆಲಸ ಸರಿಯಾಗಿಲ್ಲವೆಂಬ ದೂರು ಕೇಳುವಿರಿ. ಇತರರ ಟೀಕೆಗೆ ತಲೆ ಕೆಡಿಸಿಕೊಳ್ಳಬೇಡಿ. ಆತ್ಮವಿಶ್ವಾಸವಿರಲಿ.

ಸಿಂಹ
ಆಪ್ತರ  ಜತೆಗಿನ ವಿರಸವನ್ನು ಪರಿಹರಿಸಿಕೊಳ್ಳುವಿರಿ. ಹಣಕಾಸು ಸ್ಥಿತಿ ಉತ್ತಮಗೊಳ್ಳಲಿದೆ. ದೈಹಿಕ ಮತ್ತು ಮಾನಸಿಕ ನೆಮ್ಮದಿ.

ಕನ್ಯಾ
ಫಲಪ್ರದ ದಿನ. ಆತ್ಮವಿಶ್ವಾಸ ಹೆಚ್ಚಿ ಸುವ ಬೆಳವಣಿಗೆ. ಕಷ್ಟವೆಂದು ಕೊಂಡಿದ್ದ ಕಾರ್ಯವೊಂದು ಸುಲಭದಲ್ಲಿ  ಮುಗಿಯಲಿದೆ.

ತುಲಾ
ಕೆಲಸದಲ್ಲಿ ಪ್ರಗತಿ.ಕಾರ್ಯ ನಿರ್ವಹಣೆ ಬಗ್ಗೆ  ಮೇಲಕಾರಿಗಳಿಂದ ಮೆಚ್ಚುಗೆ. ಇತರರ ಪ್ರೋತ್ಸಾಹ
ವನ್ನು ಪಡೆಯುವಿರಿ. ಆರ್ಥಿಕ ಸುಧಾರಣೆ.

ವೃಶ್ಚಿಕ
ಆರ್ಥಿಕ ಸ್ಥಿತಿ ತೃಪ್ತಿಕರವೆನಿಸಲಿದೆ. ಉಳಿತಾಯದ ಅವಕಾಶವೂ ಲಭ್ಯ. ಕುಟುಂಬದಲ್ಲಿ ಸಂತೋಷದ ವಾತಾವರಣ.

ಧನು
ಆರಾಮವಾಗಿ ಇರಲು ಇಂದಿನ ದಿನ ಅವಕಾಶ ನೀಡುವುದಿಲ್ಲ. ಏನಾದರೊಂದು ಕಿರಿಕಿರಿ ಬಾಸಬಹುದು. ಗುರಿ ಸಾಸಲು ಧೈರ್ಯದ ಕೊರತೆಯೂ ಇದೆ.

ಮಕರ
ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಸೂಕ್ತ ದಿನ. ಎಲ್ಲವೂ ನಿಮಗೆ ಅನುಕೂಲಕರವಾಗಿ ನಡೆಯುವುದು. ಪ್ರೀತಿಪಾತ್ರರ ಜತೆ ಸಮಯ ಕಳೆಯುವಿರಿ

ಕುಂಭ
ಕೆರಿಯರ್‌ಗೆ ಸಂಬಂಸಿ ಉತ್ತಮ ಅವಕಾಶಗಳು ಒದಗಲಿವೆ. ವೃತ್ತಿಯಲ್ಲಿ ನಿಮಗೆ ಅನುಕೂಲ ಕರವಾದ ಬೆಳವಣಿಗೆ. ಕೌಟುಂಬಿಕ ಶಾಂತಿ. ಆರ್ಥಿಕ ಸುಧಾರಣೆ.

ಮೀನ
ನಿಮ್ಮ ಕ್ಷಿಪ್ರ ನಿರ್ಧಾರ, ಕಾರ್ಯದಿಂದ ಒಳಿತಾ ಗಲಿದೆ. ಸಂಭಾವ್ಯ ಸಮಸ್ಯೆ ಪರಿಹಾರ ಕಾಣಲಿದೆ. ಇತರರ ಸಹಕಾರ ಪಡೆಯಲು ಸಫಲರಾಗುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!