Tuesday, March 28, 2023

Latest Posts

ರಾಜ್ಯದಲ್ಲಿ ಈ ಬಾರಿ ಅವಧಿಗೂ ಮುನ್ನವೇ ಪೂರ್ವ ಮುಂಗಾರು ಪ್ರವೇಶ?

ಹೊಸದಿಗಂತ ಡಿಜಿಟಲ್‌ ಡೆಸ್ಕ್ : 

ರಾಜ್ಯದಲ್ಲಿ ದಿನೇ ದಿನೇ ತಾಪಮಾನ, ಬಿಸಿಲ ಧಗೆ ಹೆಚ್ಚುತ್ತಲ್ಲೇ ಇದ್ದು, ಈ ಕಾರಣದಿಂದ 2023ರ ಪ್ರಸಕ್ತ ವರ್ಷ ಅವಧಿಗೂ ಮುನ್ನವೇ ಪೂರ್ವ ಮುಂಗಾರು ಆಗಮಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಈ ವರ್ಷ ಅವಧಿಗೂ ಮೊದಲೇ ಪೂರ್ವ ಮುಂಗಾರು ಮಳೆಯು ಸುರಿದ ತಂಪೆರೆಯುವ ಸಾಧ್ಯತೆ ಇದೆ. ಈ ಹಿನ್ನೆಲೆ ಸದ್ಯ ಸೃಷ್ಟಿಯಾಗಿರುವ ಗರಿಷ್ಠ ಹವಾಮಾನದ ವಾತಾವರಣ ಎಂದುಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಿಂಗಳ ಮೊದಲ ವಾರವೇ ದೇಶದ ರಾಜಧಾನಿ ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಮಹಾರಾಷ್ಟ್ರದಲ್ಲಿ ಮಾರ್ಚ್ 6 ರಿಂದ ಎರಡು ದಿನ ಅಕಾಲಿಕ ಮಳೆ ದಾಖಲಾಗಿದೆ. ಇತ್ತ 30 ವರ್ಷಗಳ ನಂತರ ಅತ್ಯಂತ ಬಿಸಿಲು ದಾಖಲಾಗಿದೆ. ಈ ರೀತಿ ಹವಾಮಾನ ವಾತಾವರಣದಿಂದ ಮುಂಗಾರು ಪೂರ್ವ ಮಳೆಗೆ ಅವಧಿಗೂ ಮುನ್ನವೇ ಬರುವ ನಿರೀಕ್ಷೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ದೇಶದ ಉತ್ತರ ಹಾಗೂ ಕೇಂದ್ರ ಭಾಗದಲ್ಲಿ ಇದೇ ಮಾರ್ಚ್‌ 15ರವರೆಗೂ ಹಲವೆಡೆ ಹಗುರ ಮಳೆಯಾಗಲಿದೆ. ಮಾರ್ಚ್‌ 16ರಿಂದ 22ರ ತನಕ ದೇಶದ ದಕ್ಷಿಣ ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.

ಪ್ರತಿ ವರ್ಷ ಸಾಮಾನ್ಯವಾಗಿ ಪೂರ್ವ ಮುಂಗಾರು ಮಳೆ ಸುರಿಸುವ ಮಾರುತಗಳು ಮಾರ್ಚ್‌ ತಿಂಗಳಲ್ಲಿ ಮಧ್ಯದಲ್ಲಿ ರಚನೆಯಾಗುತ್ತವೆ. ಆದರೆ ಈ ವರ್ಷ ಬೇಗ ಸೃಷ್ಟಿಯಾಗಿವೆ. ಹೆಚ್ಚಿರುವ ಉಷ್ಣಾಂಶವು ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!