ಶಿವರಾತ್ರಿಯ ದಿನ ರಾಮೇಶ್ವರಂ ಪುನರ್ ಜನ್ಮವಾಗುತ್ತೆ: ಮಾಲೀಕ ರಾಘವೇಂದ್ರ ರಾವ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಬಗ್ಗೆ ಪೊಲೀಸ್ ತನಿಖೆ ತೀವ್ರವಾಗುತ್ತಿದೆ. ಕರಣದ ತನಿಖೆಗೆ 8 ರಿಂದ 10 ತಂಡ ರಚಿರುವ ಪೊಲೀಸರು ಆರೋಪಿಯ ಬೇಟೆಗೆ ಇಳಿದಿದ್ದಾರೆ.

ಇತ್ತ ರಾಮೇಶ್ವರಂ ಕೆಫೆ ಮಾಲೀಕ ರಾಘವೇಂದ್ರ ರಾವ್​ , ಶಿವರಾತ್ರಿಯ ಮುಂದಿನ ಶುಕ್ರವಾರ ರಾಮೇಶ್ವರಂ ಪುನರ್ ಜನ್ಮವಾಗುತ್ತೆ. ನಮ್ಮ ಸಂಸ್ಥೆ ವತಿಯಿಂದ ಕರ್ನಾಟಕದ ಜನತೆಗೆ ವಂದನೆ ಹೇಳುತ್ತೇನೆ. ರಾಮೇಶ್ವರಂ ಕೆಫೆ ನಿನ್ನೆ ಮೊನ್ನೆ ಹುಟ್ಟಿದ್ದಲ್ಲ. 2012 ರಲ್ಲಿ ಕುಮಾರಪಾರ್ಕ್ ಸಮೀಪ ಶುರು ಮಾಡಿದೇವೆ. ತುಂಬಾ ಸವಾಲುಗಳು ನಮಗೆ ಎದುರಾಗಿದೆ. ತಲೆತಲಾಂತರವಾಗಿ ನಮಗೆ ಕಷ್ಟಗಳು ಬರುತ್ತಿದ್ದು ಎದುರಿಸುತ್ತಿದ್ದೇವೆ. ನಾವು ಎಪಿಜೆ ಅಬ್ದುಲ್ ಕಲಾಂ ನಂಬಿದ್ದೇವೆ. ಅವರ ಜನ್ಮಸ್ಥಳ ರಾಮೇಶ್ವರಂ ಎಂದಿದ್ದಾರೆ.

ಕೋಲಾರ ತಾಲೂಕು‌ಮಾಲೂರಿನ ಹುಳದೇನಹಳ್ಳಿ ಗ್ರಾಮದವನು ನಾನು. ರಾಮೇಶ್ವರಂ ಪ್ರಾರಂಭಕ್ಕೂ ಮುನ್ನ ಹಲವು ಹೊಟೇಲ್​ಗಳಲ್ಲಿ ಕೆಲಸ ಮಾಡಿದ್ದೇವೆ. ಕಲ್ಲುಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡಿದ್ದೇವೆ. ಭಾರತೀಯರೆಲ್ಲರೂ ಇಂತಹ ಕೃತ್ಯವನ್ನು ಖಂಡಿಸಬೇಕಿದೆ. ಎಲ್ಲಾ ಗಣ್ಯರು ಪೋಲಿಸರು ನಿನ್ನೆಯಿಂದಲೂ ನಮ್ಮ ಜೊತೆಗಿದ್ದಾರೆ. ಪ್ರತಿಯೊಬ್ಬರು ಬಂದು ಶುಕ್ರವಾರ ರೀ ಓಪನ್ ಮಾಡುತ್ತೇವೆ ಎಂದು ಹೇಳಿದ್ದಾರೆ.

ಯಾವುದೇ ವ್ಯವಹಾರಿಕ ದ್ವೇಷದಿಂದ ಕೃತ್ಯ ನಡೆದಿಲ್ಲ. ಹೊಟೇಲ್ ಬ್ಯುಸಿನೆಸ್ ಮಾಡುವವರು ಈ ರೀತಿ ಕೃತ್ಯ ಮಾಡುವುದಿಲ್ಲ. ಅನ್ ಐಡೆಂಟಿಪೈಡ್ ಐಟಂ ಆಗಿದ್ದರೆ ನಾವು ಅದನ್ನು ಆ್ಯಪ್​ನಲ್ಲಿ ಹಾಕುತ್ತಿದೆವು. ನಿನ್ನೆ ಘಟನೆ ವೇಳೆ ನಮ್ಮ ಸಿಬ್ಬಂದಿ ನೋಟಿಸ್ ಬರಲು ಗ್ರಾಹಕರ ದಟ್ಟಣೆಯಿತ್ತು ಎಂದಿದ್ದಾರೆ.

ನವಂಬರ್​ನಲ್ಲಿ ಬಸವೇಶ್ವರ ನಗರದ ಬ್ರಾಂಚ್​ನಲ್ಲಿ ಬ್ಯಾಗ್ ಪತ್ತೆಯಾಗಿತ್ತು. ಕೂಡಲೆ ಪೊಲೀಸರ ಗಮನಕ್ಕೆ ತಂದಿದ್ದೇವೆ. ಅದು ಯಾವುದೇ ಸಂಶಯಾಸ್ಪದವಾಗಿರಲಿಲ್ಲ. ಪಂಚೆ ಮತ್ತು ವಸ್ತ್ರ ಇತ್ತು ಅಷ್ಟೇ. ನಾವು ಗಾಯಾಳುಗಳ ಚಿಕಿತ್ಸೆ ವೆಚ್ಚ ಭರಿಸಲಿದ್ದೇವೆ. ಸರ್ಕಾರ ಕೂಡ ಹೇಳಿದೆ ನಾವು ಇರುತ್ತೇವೆ ಅಂತ. ಹಾಗಾಗಿ ನಾವೇ ಚಿಕಿತ್ಸೆ ವೆಚ್ಚ ಭರಿಸುತ್ತೇವೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!