Friday, March 31, 2023

Latest Posts

ಪುನೀತ್ ರಾಜಕುಮಾರ್ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್‌ : ಅಮೆಜಾನ್ ಪ್ರೈಮ್ ನಲ್ಲಿ ‘ಗಂಧದಗುಡಿ’

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

‘ಕರ್ನಾಟಕ ರತ್ನ’ ಡಾ. ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಸಿಗಲಿದೆ.

ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕನಸಿನ ಕೂಸು ಗಂಧದ ಗುಡಿ ಡಾಕ್ಯು ಚಿತ್ರ ಇದೇ ಮಾರ್ಚ್‌ 17ರಂದು ಅಮೆಜಾನ್‌ ಪ್ರೈಂ ನಲ್ಲಿ ಬಿಡುಗಡೆಗೆ ಸಜ್ಜಾಗಿದೆ.

ಅಮೋಘವರ್ಷ ನಿರ್ದೇಶಿಸಿರುವ ಪುನೀತ್ ರಾಜ್‌ಕುಮಾರ್ ಅಭಿನಯಿಸಿದ ಕೊನೆಯ ಸಿನಿಮಾ ‘ಗಂಧದ ಗುಡಿ’ ಕಳೆದ ವರ್ಷ ಅಕ್ಟೋಬರ್ 28ರಂದು ತೆರೆ ಕಂಡಿತ್ತು. ಸುಮಾರು 90 ನಿಮಿಷಗಳ ‘ಗಂಧದಗುಡಿ’ಯನ್ನು ಅದ್ದೂರಿಯಾಗಿ ಬಿಗ್ ಬಜೆಟ್‌ ಸಿನಿಮಾ ರೀತಿಯಲ್ಲೇ ತೆರೆಗೆ ತರಲಾಗಿತ್ತು.

ಇದೀಗ ‘ಗಂಧದಗುಡಿ’ಯನ್ನು ಓಟಿಟಿಯಲ್ಲಿ ರಿಲೀಸ್ ಮಾಡಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮುಂದಾಗಿದ್ದು, ಪುನೀತ್ ಹುಟ್ಟುಹಬ್ಬದ (ಮಾ.14) ವಿಶೇಷ ದಿನದಂದು ‘ಗಂಧದಗುಡಿ’ ಓಟಿಟಿ ರಿಲೀಸ್‌ ಡೇಟ್ ಘೋಷಣೆ ಮಾಡಲಾಗಿದೆ.

ಮಾರ್ಚ್ 17ರಿಂದ ಅಮೆಜಾನ್ ಪ್ರೈಮ್‌ನಲ್ಲಿ ‘ಗಂಧದಗುಡಿ’ ಪ್ರಸಾರ ಆರಂಭಿಸಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!