ನಂಜನಗೂಡಿನ ನಂಜುಂಡೇಶ್ವರನ ದರುಶನ ಪಡೆದ ಪ್ರಧಾನಿ ಮೋದಿ!

ಹೊಸದಿಗಂತ ವರದಿ, ಮೈಸೂರು:

ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಸಂಜೆ ದಕ್ಷಿಣ ಕಾಶಿ ಎಂದು ಹೆಸರಾಗಿರುವ ಮೈಸೂರು ಜಿಲ್ಲೆಯ ನಂಜನಗೂಡಿಗೆ ಭೇಟಿ ನೀಡಿ, ನಂಜುಂಡೇಶ್ವರನ ದರುಶನವನ್ನು ಪಡೆದರು.

ನಂಜನಗೂಡು ತಾಲೂಕಿನ ಎಲಚಗೆರೆ ಬೋರೆ ಗ್ರಾಮದಲ್ಲಿ ಬಿಜೆಪಿಯಿಂದ ಆಯೋಜಿಸಲಾಗಿದ್ದ ವಿಧಾನಸಭೆ ಚುನಾವಣೆಯ ಸಾರ್ವಜನಿಕ ಬೃಹತ್ ಸಮಾರಂಭದಲ್ಲಿ ಪಾಲ್ಗೊಂಡು ಅವರು, ಬಳಿಕ ಬುಲೇಟ್ ಪ್ರೂಪ್ ಕಪ್ಪು ಬಣ್ಣದ ಕಾರಿನಲ್ಲಿ ನಂಜನಗೂಡಿನ ನಂಜುoಡೇಶ್ವರ ದೇವಸ್ಥಾನಕ್ಕೆ ಆಗಮಿಸಿದರು.

ದೇವಸ್ಥಾನದ ಆಡಳಿತ ಮಂಡಳಿಯಿoದ ಪೂರ್ಣಕುಂಭ ಸ್ವಾಗತವನ್ನು ಮೋದಿಯವರಿಗೆ ನೀಡಲಾಯಿತು. ಅರ್ಚಕರು ಮೋದಿಯವರನ್ನು ಬರಮಾಡಿಕೊಂಡು ದೇವಸ್ಥಾನಕ್ಕೆ ಕರೆದುಕೊಂಡು ಹೋದರು. ಮೊದಲು ಬೆಣ್ಣೆ ಗಣಪತಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದ ಮೋದಿ, ಬಳಿಕ ನಂಜುಂಡೇಶ್ವರ ಬಳಿಗೆ ತೆರಳಿ, ದರ್ಶನ ಪಡೆದರು. ಬಿಲ್ವಪತ್ರವನ್ನು ಅರ್ಪಿಸಿ ಪೂಜೆ ಸಲ್ಲಿಸಿದರು. ಶಿರಭಾಗಿ ನಂಜುಂಡೇಶ್ವರನಿಗೆ ನಮಿಸಿದರು.

ಕೆಲಕಾ ಧ್ಯಾನ ಮಾಡಿದರು. ಬಳಿಕ ಮೋದಿ ಅವರನ್ನು ಅರ್ಚಕರು, ಪಾರ್ವತಿ ಮಂದಿರಕ್ಕೆ ಕರೆದುಕೊಂಡು ಹೋಗಿ ದರುಶನ ಮಾಡಿಸಿದರು. ಬಳಿಕ ಪಕ್ಕದಲ್ಲಿದ್ದ ನಾರಾಯಣಸ್ವಾಮಿ, ಆಂಜನೇಯಸ್ವಾಮಿ ದದರುಶನ ಪಡೆದ ಮೋದಿ, ಮಹಾನಂದಿಯ ದರ್ಶನ ಪಡೆದು ಮಂಗಳಾರತಿ ಪಡೆದರು.

ದೇವಸ್ಥಾನದಿಂದ ಸನ್ಮಾನ, ಪ್ರಸಾದವನ್ನು ಸ್ವೀಕರಿಸಿದರು. ಬಳಿಕ ದೇವಸ್ಥಾನದಿಂದ ಹೊರಬಂದು, ಕಾರನ್ನೇರಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ಪ್ರಯಾಣಿಸಿದರು. ಮೋದಿಯವರ ಭೇಟಿಯ ಹಿನ್ನಲೆಯಲ್ಲಿ ಮಧ್ಯಾಹ್ನದಿಂದಲೇ ನಂಜುಂಡೇಶ್ವರ ದೇವಸ್ಥಾನಕ್ಕೆ ಸಾರ್ವಜನಿಕರು. ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಬೆಳ್ಳಿಯ ನಂಜುಂಡೇಶ್ವರ ಪ್ರತಿಮೆ ಉಡುಗೊರೆ; ನಂಜನಗೂಡು ತಾಲೂಕಿನ ಎಲಚಗೆರೆ ಬೋರೆ ಗ್ರಾಮದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿಯವರಿಗೆ ಶ್ರೀಗಂಧದ ಹಾರ ಹಾಕಿ, ರೇಷ್ಮೆ ಶಲ್ಯ ಹೊದಿಸಿ, ಬೆಳ್ಳಿಯಿಂದ ಮಾಡಿದ್ದ ನಂಜುಂಡೇಶ್ವರ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!