ದಾಖಲೆ ಸೃಷ್ಟಿಸಿದೆ ಪ್ರಧಾನಿ ಮೋದಿ ಬೆಂಗಳೂರು ರೋಡ್ ಶೋ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಬೆಂಗಳೂರಿನ ಬಹುತೇಕ ರಸ್ತೆಗಳು ಕೇಸರಿಮಯವಾಗಿವೆ, ಪ್ರಧಾನಿ ಮೋದಿಯನನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ರಸ್ತೆಯ ಇಕ್ಕೆಲಗಳಲ್ಲಿ ಬಂದು ನಿಂತಿದ್ದಾರೆ.

ಇದೀಗ ಪ್ರಧಾನಿ ಮೋದಿ ರೋಡ್ ಶೋ ಸಂಪನ್ನವಾಗಿದ್ದು, ಇತಿಹಾಸ ಸೃಷ್ಟಿಸಿದ ರೋಡ್ ಶೋ ಇದಾಗಿದೆ. ಇಲ್ಲಿಯವರೆಗೂ ಯಾವುದೇ ಪ್ರಧಾನಿಯೂ ಬೆಂಗಳೂರಿನಲ್ಲಿ ಇಷ್ಟೊಂದು ದೊಡ್ಡ ರೋಡ್ ಶೋ ನಡೆಸಿಯೇ ಇಲ್ಲ.

ಬರೋಬ್ಬರಿ 26.5 ಕಿ.ಮೀ. ರೋಡ್ ಶೋ ನಡೆಸಿದ್ದು, ಬೆಂಗಳೂರು ಇತಿಹಾಸಕ್ಕೆ ಸಾಕ್ಷಿಯಾಗಿದೆ. ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಮಲ್ಲೇಶ್ವರಂ 18 ನೇ ಕ್ರಾಸ್‌ವರೆಗೂ ರೋಡ್ ಶೋ ನಡೆದಿದೆ. ಜನರ ಹೂವಿನ ಮಳೆಯನ್ನೇ ಸುರಿಸಿದ್ದು, ಮೋದಿ ಮೋದಿ ಎನ್ನುವ ಘೋಷಣೆಗಳು ಎಲ್ಲೆಡೆ ಕೇಳಿಬಂದಿದೆ. ಯಾವುದೇ ಅಹಿತಕರ ಘಟನೆಗಳಿಲ್ಲದೆ ಪ್ರಧಾನಿ ಮೋದಿ ರೋಡ್ ಶೋ ಮುಕ್ತಾಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!