September 22, 2026
Tuesday, September 22, 2026
spot_img

ಇನ್ಮುಂದೆ ವಾರಕ್ಕೆ ಎರಡು ದಿನ ವರ್ಚುವಲ್ ವಿಚಾರಣೆಗೆ ಮುಂದಾದ ಸುಪ್ರೀಂಕೋರ್ಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ಮೋದಿ ಅವರ ವರ್ಕ್ ಫ್ರಂ ಹೋಮ್, ಮಿತ ಇಂಧನ ಬಳಕೆ ಮನವಿಗೆ ದೇಶದ ನಾಗರಿಕರು ಸ್ಪಂದಿಸುತ್ತಿದ್ದು, ಇದೀಗ ಸುಪ್ರೀಂಕೋರ್ಟ್ ಕೂಡ ವಾರಕ್ಕೆ ಎರಡು ದಿನ ವರ್ಚುವಲ್ ವಿಚಾರಣೆ ನಡೆಸಲು ತೀರ್ಮಾನಿಸಿದೆ.

ಇನ್ಮುಂದೆ ಸೋಮವಾರ ಹಾಗೂ ಶುಕ್ರವಾರದಂದು ಆನ್‌ಲೈನ್ ಮೂಲಕ ವಿಚಾರಣೆ ನಡೆಸಲು ನಿರ್ಧರಿಸಿದೆ. ಉಳಿದ ದಿನಗಳಾದ ಮಂಗಳವಾರದಿಂದ ಗುರುವಾರದವರೆಗೆ ಎಲ್ಲಾ ವಿಚಾರಣೆಗಳು ನ್ಯಾಯಾಲಯದಲ್ಲಿ ನಡೆಯುತ್ತವೆ. ಒಂದು ವೇಳೆ ಈ ಸಮಯದಲ್ಲಿ ವಕೀಲರು ಹಾಗೂ ಕಕ್ಷಿದಾರರು ವಿಚಾರಣೆಗಾಗಿ ಆನ್‌ಲೈನ್ ಅಥವಾ ನ್ಯಾಯಾಲಯಕ್ಕೆ ಬಂದು ಹಾಜರಾಗುವ ಆಯ್ಕೆಗಳನ್ನು ಹೊಂದಿದ್ದಾರೆ ಎಂದು ತಿಳಿಸಿದೆ.

ಜೊತೆಗೆ ನ್ಯಾಯಾಲಯದ ಕಚೇರಿಯಲ್ಲಿ ಕೆಲಸ ಮಾಡುವ ಶೇಕಡಾ 50 ರಷ್ಟು ಸಿಬ್ಬಂದಿಗೆ ವಾರದಲ್ಲಿ ಎರಡು ದಿನ ಮನೆಯಿಂದ ಕೆಲಸ ಮಾಡಲು ಅನುಮತಿ ನೀಡಿದೆ. ಈ ಮೂಲಕ ಕೋರ್ಟ್ ಕೆಲಸಗಳು ಸುಸೂತ್ರವಾಗಿ ನಡೆಯಲು ಸಹಕಾರಿಯಾಗಲಿದೆ.

ಇದೇ ವೇಳೆ ಯಾವುದೇ ನಿರ್ದಿಷ್ಟ ಕಚೇರಿಯಲ್ಲಿ ಸಿಬ್ಬಂದಿಯ ಖುದ್ದು ಹಾಜರಾತಿಯ ಅಗತ್ಯವಿದ್ದರೆ, ಅಧಿಕಾರಿಗಳು ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಗಳನ್ನು ನಿರ್ಬಂಧಿಸಬಹುದು ಅಥವಾ ಮಾರ್ಪಡಿಸಬಹುದು ಎಂದು ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !