ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಯ ಹಂಬಲ್ ಪೊಲಿಟಿಶಿಯನ್ ನೊಗ್ರಾಜ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿರೋ ದಾನಿಶ್ ಸೇಠ್ ಕಣ್ಣ ಮುಂದೆ ಇನ್ನೊಂದು ಯಶಸ್ವೀ ಪ್ರಾಜೆಕ್ಟ್ ಇದೆ.
ಪುನೀತ್ ರಾಜ್ ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ದಾನಿಶ್ ಅಭಿನಯದ ಒನ್ ಕಟ್ ಟು ಕಟ್ ಸಿನಿಮಾ ಇನ್ನೇನು ರಿಲೀಸ್ ಆಗಲಿದೆ.
ಇದೀಗ ಪುನೀತ್ ಬಗ್ಗೆ ದಾನಿಶ್ ಮಾತನಾಡಿದ್ದಾರೆ. ಪಿಆರ್‌ಕೆ ಬ್ಯಾನರ್‌ನಲ್ಲಿ ಇದು ನನ್ನ ಎರಡನೇ ಸಿನಿಮಾ. ಎಷ್ಟೋ ಜನರಿಗೆ ಟ್ಯಾಲೆಂಟ್ ಇರತ್ತೆ ಆದರೆ ಚಾನ್ಸ್ ಸಿಗೋದಿಲ್ಲ. ಆದರೆ ಪಿಆರ್‌ಕೆ ನನ್ನನ್ನು ಹುಡುಕಿದೆ. ಈ ಬಗ್ಗೆ ನನಗೆ ಖುಷಿ ಇದೆ. ಪುನೀತ್ ಅವರು ನನ್ನ ಸಿನಿಮಾ ನೋಡಿ ಆಗಿತ್ತು. ನನ್ನ ನಟನೆಯನ್ನು ಮೆಚ್ಚಿದ್ದರು. ಮನಸ್ಸು ತುಂಬಾ ನಕ್ಕಿದ್ದರು. ಇದೆಲ್ಲವೂ ಈಗ ನೆನಪು ಅಷ್ಟೆ. ಅವರದ್ದು ತುಂಬಾ ದೊಡ್ಡ ಮನಸ್ಸು. ನನ್ನ ನಟನೆಯನ್ನು ಅವರಷ್ಟು ಯಾರೂ ಇಷ್ಟಪಡೋದಕ್ಕೆ ಸಾಧ್ಯವೇ ಇಲ್ಲ. ಪುನೀತ್ ಅವರನ್ನು ಮಿಸ್ ಮಾಡ್ತೇನೆ ಎಂದು ದಾನಿಶ್ ಹೇಳಿಕೊಂಡಿದ್ದಾರೆ.