ಜಂಬೂಸವಾರಿಯಲ್ಲಿ ಸಾಗಿದ ಪುನೀತ್ ರಾಜ್ ಕುಮಾರ್ ಸ್ತಬ್ಧ ಚಿತ್ರ!

ಹೊಸದಿಗಂತ ವರದಿ, ಮೈಸೂರು:

ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಕೊನೆ ದಿನ ನಡೆದ ವಿಶ್ವಾಕರ್ಷಣೆಯ ಜಂಬೂ ಸವಾರಿ ಮೆರವಣಿಗೆಯಲ್ಲಿ ಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಸಾಗಿದರು. ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದಿಂದ ಅಪುö್ಪ ಸ್ತಬ್ಧಚಿತ್ರ ಅನ್ನು ರೂಪಿಸಲಾಗಿದೆ.
ಚಾಮರಾಜನಗರ ರಾಯಭಾರಿ ಆಗಿದ್ದ ಹಾಗೂ ಚಾಮರಾಜನಗರದ ತವರಿನ ನಂಟು ಹೊಂದಿದ್ದ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಸ್ತಬ್ಧ ಚಿತ್ರದ ಮೂಲಕ ಗೌರವ ಸಲ್ಲಿಸಲು ಚಾಮರಾಜನಗರ ಜಿಲ್ಲಾ ಪಂಚಾಯತ್ ಸ್ತಬ್ದ ಚಿತ್ರ ನಿರ್ಮಿಸಿದೆ.
ಹನೂರಿನ ಕಲಾವಿದ ಮಹಾದೇವ್ ಎಂಬುವರೊಟ್ಟಿಗೆ 15 ಜನರ ತಂಡ ಈ ಸ್ತಬ್ಧ ಚಿತ್ರ ತಯಾರಿಸಿದ್ದಾರೆ. “ಪ್ರಕೃತಿ ಮಡಿಲಿನ ಹುಲಿ ಮತ್ತು ಆನೆ ಅರಣ್ಯಧಾಮ” ಎಂದು ಸ್ತಬ್ಧ ಚಿತ್ರಕ್ಕೆ ಹೆಸರಿಡಲಾಗಿದೆ. ಜಿಲ್ಲೆಯ ಪ್ರಕೃತಿ, ವನ್ಯಜೀವಿ ಸಂಪತ್ತು, ಪವಾಡ ಪುರುಷ ಮಲೆ ಮಹದೇಶ್ವರ ಸ್ವಾಮಿಯನ್ನು ಸ್ತಬ್ಧ ಚಿತ್ರದಲ್ಲಿ ಬಿಂಬಿಸಲಾಗಿದೆ.
ಸ್ತಬ್ಧಚಿತ್ರದ ಮುಂಭಾಗ ದೊಡ್ಡ ಹುಲಿಯ ಮುಖ ಇದೆ. ಹಸಿರು ಆವರಿಸಿರುವ ಬೆಟ್ಟ, ಆನೆ ಸೇರಿದಂತೆ ಇತರೆ ಪ್ರಾಣಿಗಳು, ಮಧ್ಯದಲ್ಲಿ ಹುಲಿಯ ಮೇಲೆ ಕುಳಿತಿರುವ ಮಲೆ ಮಹದೇಶ್ವರ ಸ್ವಾಮಿಯ ಪ್ರತಿಕೃತಿ ಹಾಗೂ ಹಿಂಭಾಗದಲ್ಲಿ ಮಂದಸ್ಮಿತ ಪುನೀತ್‌ರಾಜ್‌ಕುಮಾರ್ ಅವರ ದೊಡ್ಡ ಪ್ರತಿಕೃತಿ ಅಳವಡಿಸಲಾಗಿದೆ. ಮೆರವಣಿಗೆಯಲ್ಲಿನ ಸ್ತಬ್ದ ಚಿತ್ರದಲ್ಲಿ ಸಾಗಿದ ಅಪ್ಪುವನ್ನು ನೋಡಿ ಎಲ್ಲರೂ ಕ್ಷಣಕಾಲ ಭಾವುಕರಾಗಿ ಕಣ್ತುಂಬಿ ಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!