ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದ ಸಿಎಂ

ಹೊಸದಿಗಂತ ವರದಿ, ಮೈಸೂರು:

ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಕೊನೆ ದಿನವಾದ ಬುಧವಾರ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಐರಾವತ ಬಸ್ಸಿನಲ್ಲಿ ಅರಮನೆಯ ಬಲರಾಮ ದ್ವಾರಕ್ಕೆ ಬಂದಿಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮಧ್ಯಾಹ್ನ 2.36ರಿಂದ 2.50ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ಬಳಿಕ ಮಹದೇವಪ್ಪ ಸೇರಿದಂತೆ ನಂದಿಧ್ವಜದ ಕಲಾವಿದರಿಗೆ ಶಾಲು ಹೊದಿಸಿ, ಅಭಿನಂದಿಸಿದರು.

ಬಳಿಕ ಮಾತನಾಡಿ, ನಾಡಿನ ಜನರು, ರೈತರು ಸುಭೀಕ್ಷವಾಗಿರಲಿ, ಸುಖ, ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲಿ. ಕನ್ನಡ ನಾಡು ಸುಭೀಕ್ಷವಾಗಿರಲಿ ಎಂದು ನಾನು ತಾಯಿ ಚಾಮುಂಡೇಶ್ವರಿಯಲ್ಲಿಪ್ರಾರ್ಥಿಸಿರುವುದಾಗಿ ತಿಳಿಸಿದರು.

ಎರಡು ವರ್ಷಗಳ ಬಳಿಕ ನಡೆಸಲಾಗುತ್ತಿರುವ ದಸರಾ ಯಶಸ್ವಿಯಾಗಿದೆ. ಲಕ್ಷಾಂತರ ಮಂದಿ ಬಂದು ವೀಕ್ಷಿಸುತ್ತಿದ್ದಾರೆ. ದಸರಾವನ್ನು ಯಶಸ್ವಿಗೊಳಿಸಿದ ಜಿಲ್ಲಾಡಳಿತ, ಮೈಸೂರಿನ ಜನತೆ, ಸಚಿವರು, ಶಾಸಕರುಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಬಳಿಕ ಅಲ್ಲಿಂದ ತೆರದ ವಾಹನದಲ್ಲಿ ಅರಮನೆಯ ವೇದಿಕೆ ಬಳಿಗೆ ಎರಡು ಬದಿಯಲ್ಲಿದ್ದ ಜನರಿಗೆ ಕೈ ಬೀಸುತ್ತಾ ಆಗಮಿಸಿದರು. ಅವರಿಗೆ ಸಚಿವರಾದ ಸುನೀಲ್ ಕುಮಾರ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ನಗರಪಾಲಿಕೆಯ ಮೇಯರ್ ಶಿವಕುಮಾರ್ ಮತ್ತಿತರರು ಸಾಥ್ ನೀಡಿದರು. ದಸರಾದ ಅವಿಭಾಜ್ಯ ಅಂಗ ನಂದೀಧ್ವಜ ಕುಣಿತವಾಗಿದೆ. ವಿಜಯದಶಮಿ ದಿನದಂದು ಇದಕ್ಕೆಎಲ್ಲಿಲ್ಲದ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಇದು ಇತರ ಜಾತ್ರೆ, ಹಬ್ಬದ ವೇಳೆಯೂ ಪ್ರಮುಖ ಎನಿಸಿರುವ ಜಾನಪದಕಲೆಯಾಗಿದೆ.

ನಂದೀಧ್ವಜವನ್ನುಗಟ್ಟಿಮುಟ್ಟಾದ ಬಿದಿರಿನ ಗಳ ಬಳಸಿಕೊಂಡು ಅದರ ಸುತ್ತ ಟೊಳ್ಳಾದ ಬಳೆಗಳನ್ನು ಒಂದರ ಮೇಲೊಂದರoತೆ ಇರಿಸಿ, ಈ ಬಳೆಗಳ ಟೊಳ್ಳಿನೊಳಗೆ ಚಿಕ್ಕಕಲ್ಲುಅಥವಾ ಹುಣಸೆ ಬೀಜತುಂಬಿರುತ್ತಾರೆ. ಇವು ಖಣಿಖಣಿ ಸದ್ದು ಮಾಡುತ್ತವೆ. ಕಂಬದಲ್ಲಿನ ಪೀಠದಲ್ಲಿ ನಂದೀ ವಿಗ್ರಹಇರುತ್ತದೆ, ಪೀಠದ ಮೇಲೆಯೇ ಇರುವ ಈ ಬಳೆಗಳಿಗೆ ಗಗ್ಗರ, ಹರಡೆ, ಗಗ್ಗ ಎಂಬ ಹೆಸರಿವೆ. ಹರಡೆ ಮೇಲೆ, ಕೆಳಗೆ ಕೊಳಗ ಎಂದು ಕರೆಯುವತಟ್ಟೆಯಾಕಾರದ ಲೋಹದ ಉಂಗುರಗಳು ಇರುತ್ತವೆ. ನಂದಿ ಕಂಬಕ್ಕೂ ಬಿರಡೆ ಕಂಬ, ವ್ಯಾಸಗೋಲು, ನಂದಿಕoಬ, ನಂದಿಪಟ ಎಂದೂ ಕರೆಯಲಾಗುತ್ತಿದೆ.

ದಸರಾದಲ್ಲಿ ಬಳಸುವ ಈ ನಂದಿಕoಬ 33 ಅಡಿ ಎತ್ತರವಿದ್ದು, 125 ಕೆ.ಜಿ.ತೂಗುತ್ತದೆ. ಇದರಲ್ಲಿ ಹತ್ತು ವರ್ಣಗಳ ಧ್ವಜವಿದ್ದು, ಇದರ ಮೇಲೆ ಪಂಚಕಳಶವಿದೆ. ಈ ಕುಣಿತಕ್ಕೆಕರಡೆ, ಡೊಳ್ಳು, ಸೊನಾಮಿ, ತಾಳ, ಚಮ್ಮಾಳ ಎಂಬ ವಾದ್ಯಗಳ ಹಿನ್ನೆಲೆ ಇರುತ್ತದೆ. ಇದೊಂದು ಕಲೆಯೂ ಆಗಿದ್ದು, ಕುಣಿಯುವವರು ಭಾರದ ನಂದೀಧ್ವಜವನ್ನುಎದೆ, ನೆತ್ತಿ, ಗಲ್ಲದದ ಮೇಲೆ ನಿಲ್ಲಿಸಿಕೊಂಡು ಚಮತ್ಕಾರ ಪ್ರದರ್ಶಿಸುವುದೂ ಉಂಟು.

ಈ ಕುಣಿತ ಸಾಮಾನ್ಯವಾಗಿ ವೀರಶೈವರಲ್ಲಿ ಹೆಚ್ಚಾಗಿದ್ದು, ರಾಜ್ಯದ ಬಹುತೇಕಕಡೆಕಾಣಬರುತ್ತದೆ.ಇದಕ್ಕೆಧಾರ್ಮಿಕ ನಂಬಿಕೆಯೂಇದ್ದು, ವೀರಭದ್ರಚೆಂಡಾಡಿದ ಋಷಿಮುನಿಗಳ ತಲೆ ಹರಡೆ ಎಂಬ ನಂಬಿಕೆ ಇಂದಿಗೂ ಜೀವಂತವಾಗಿ ಉಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!