Monday, March 27, 2023

Latest Posts

ಶ್ರೀ ಕೃಷ್ಣನೇ ನನ್ನ ಪತಿ, ವಾಸುದೇವನ ಮೂರ್ತಿ ಜೊತೆ ಅದ್ಧೂರಿ ವಿವಾಹವಾದ ಯುವತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಗವಾನ್ ಶ್ರೀ ಕೃಷ್ಣದ ಜೊತೆ ವಿವಾಹ ಎಂದಾಗ ನೆನಪಾಗೋದು ಮೀರಾಬಾಯಿ, ಜೀವನವನ್ನೇ ಶ್ರೀಕೃಷ್ಣನಿಗಾಗಿ ಮೀಸಲಿಟ್ಟ ಅವರ ಕಥೆಯನ್ನು ಎಲ್ಲರೂ ಕೇಳಿದ್ದೀರಿ, ಆದರೆ ಇಲ್ಲೊಬ್ಬ ಯುವತಿ ಮದುವೆಯಾಗುವುದಾದರೆ ಅದು ಶ್ರೀಕೃಷ್ಣನ ಜೊತೆ ಎಂದಿದ್ದಾಳೆ.

Woman marries Lord Krishna in Auraiyaಉತ್ತರ ಪ್ರದೇಶದ ಔರೈಯಾದಲ್ಲಿ ಭಗವಾನ್ ಶ್ರೀಕೃಷ್ಣನ ಜೊತೆ ಅದ್ಧೂರಿಯಾಗಿ ವಿವಾಹವಾದ ಯುವತಿ ರಕ್ಷಾ, ಈಕೆ ಪದವೀಧರೆ, ಶ್ರೀಕೃಷ್ಣ ದೇವರ ಮೇಲಿನ ಭಕ್ತಿಯಿಂದಾಗಿ ಆತನನ್ನೇ ಪತಿ ಎಂದು ಈಕೆ ಸ್ವೀಕರಿಸಿದ್ದಾಳೆ.

ಭಗವಂತನೇ ನನ್ನ ಪತಿ, ಕೃಷ್ಣನ ಮೂರ್ತಿಯನ್ನು ಮದುವೆಯಾದ ಯುವತಿಮಗಳ ಆಶಯದಂತೆ ತಂದೆ ಮದುವೆಯ ಅದ್ಧೂರಿ ಸಮಾರಂಭ ಏರ್ಪಡಿಸಿದ್ದು, ಶ್ರೀಕೃಷ್ಣನ ಮೂರ್ತಿ ಜತೆ ವಿವಾಹ ನೆರವೇರಿಸಿದ್ದು, ದೇವರಿಗೆ ಪ್ರಿಯವಾದ ಖಾದ್ಯಗಳನ್ನು ಬಂದವರಿಗೆ ಉಣಬಡಿಸಿದ್ದಾರೆ. ಚಂದದ ಮಂಟಪವನ್ನು ಮಾಡಿ, ಮೂರ್ತಿಯನ್ನು ಅಲಂಕರಿಸಿ, ಮಂಟಪಕ್ಕೆ ತರಲಾಗಿದೆ. ವಿವಾಹದ ನಂತರ ಬಂದ ಅತಿಥಿಗಳಿಗೆ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!