ಹೊಸದಿಗಂತ ಡಿಜಿಟಲ್ ಡೆಸ್ಕ್:
ದಸರಾ ಹಬ್ಬದಲ್ಲಿ ರಾಕ್ಷಸರ ರಾಜ ರಾವಣನ ಪ್ರತಿಕೃತಿಯನ್ನು ದಹಿಸಲಾಗುತ್ತಿದೆ. ಇದು ಈಗಿನ ಪದ್ಧತಿ ಅಲ್ಲ, ಶತಮಾನಗಳಷ್ಟು ಹಳೆಯ ಸಂಪ್ರದಾಯವಾಗಿದೆ. ಈ ಸಂಪ್ರದಾಯವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಛತ್ತೀಸ್‌ಗಢ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಬಂದಿದೆ.
ಪ್ರತೀ ವರ್ಷವು ಕೆಟ್ಟದ್ದನ್ನು ತೊಳೆದು ಹಾಕೋಣ ಎಂಬರ್ಥದಲ್ಲಿ ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಿ ದಹಿಸಲಾಗುತ್ತದೆ. ರಾವಣನಿಗೆ ಹೋಲಿಸಿದರೆ ಮಹಾಭಾರತದಲ್ಲಿ ಬರುವ ದುರ್ಯೋಧನ ಇನ್ನೂ ಕೆಟ್ಟ ಕೆಲಸಗಳನ್ನು ಮಾಡಿದ್ದಾನೆ. ರಾವಣನಿಗಿಂತ ಘೋರ ಹಾಗೂ ಗಂಭೀರ ಪಾಪಗಳನ್ನು ಮಾಡಿದ್ದಾನೆ. ಆದರೆ ರಾವಣನ ಪ್ರತಿಕೃತಿಯನ್ನೇ ಏಕೆ ದಹಿಸಬೇಕು? ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ವ್ಯಕ್ತಿಯೊಬ್ಬರು ದೂರಿದ್ದಾರೆ.
ಮಾನವ ಹಕ್ಕುಗಳ ಆಯೋಗ ಈ ಅರ್ಜಿಯನ್ನು ತಿರಸ್ಕರಿದೆ. ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸುತ್ತದೆಯೇ ಹೊರತು ಪೌರಾಣಿಕ ಸಂದಿಗ್ಧತೆಗಳನ್ನಲ್ಲ. . ರಾವಣನು ಮನುಷ್ಯನ (ಮಾನವ) ವರ್ಗಕ್ಕೆ ಸೇರುವುದಿಲ್ಲ. ಪರಿಣಾಮವಾಗಿ, ಅವನ ಪ್ರತಿಕೃತಿಯನ್ನು ಸುಡುವುದಕ್ಕೆ ಸಂಬಂಧಿಸಿದ ವಿಷಯಗಳು ಮಾನವ ಹಕ್ಕುಗಳ ಆಯೋಗದ ಕಾನೂನು ವ್ಯಾಪ್ತಿಯ ಸಂಪೂರ್ಣ ಹೊರಗೆ ಬರುತ್ತವೆ ಎಂದು ದೂರುದಾರರಿಗೆ ಮನವರಿಕೆ ಮಾಡಿಕೊಡಲಾಗಿದೆ.



