ನೇಪಾಳದ ನೂತನ ಪ್ರಧಾನಿಯಾಗಿ ಪುಷ್ಪಾ ಕಮಲ್ ದಹಲ್ ಪ್ರಚಂಡ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ನೇಪಾಳದ ನೂತನ ಪ್ರಧಾನಿಯಾಗಿ ಸಿಪಿಎನ್-ಮಾವೋವಾದಿ ಕೇಂದ್ರದ ಅಧ್ಯಕ್ಷ ಪುಷ್ಪ ಕಮಲ್ ದಹಾಲ್ ‘ಪ್ರಚಂಡ’ ಅವರನ್ನು ಭಾನುವಾರ ನೇಮಕ ಮಾಡಲಾಯಿತು.

ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಪ್ರಚಂಡ ಅವರನ್ನು ನೇಪಾಳದ ಪ್ರಧಾನ ಮಂತ್ರಿಯಾಗಿ ಸಂವಿಧಾನದ 76 ನೇ ವಿಧಿ 2 ರ ಪ್ರಕಾರ ನೇಮಕ ಮಾಡಿದರು ಎಂದು ರಾಷ್ಟ್ರಪತಿ ಕಚೇರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಎರಡು ಅಥವಾ ಹೆಚ್ಚಿನ ಪಕ್ಷಗಳ ಬೆಂಬಲದೊಂದಿಗೆ ಬಹುಮತವನ್ನು ಗಳಿಸಬಹುದಾದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಯಾವುದೇ ಸದಸ್ಯರನ್ನು ಪ್ರಧಾನ ಮಂತ್ರಿ ಹುದ್ದೆಗೆ ಹಕ್ಕು ಸಲ್ಲಿಸಲು ರಾಷ್ಟ್ರಪತಿಗಳು ಕರೆದಿದ್ದರು. ಹೀಗಾಗಿ ಗಡುವು ನೀಡಿದ್ದ ಭಾನುವಾರ ಸಂಜೆ 5 ಗಂಟೆಗೆ ಮುಗಿಯುವ ಮುನ್ನವೇ 68 ವರ್ಷದ ಪ್ರಚಂಡ ಹಕ್ಕು ಸಲ್ಲಿಸಿದ್ದರು.

ಸೋಮವಾರ ಸಂಜೆ 4 ಗಂಟೆಗೆ ನೂತನ ಪ್ರಧಾನಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ರಾಷ್ಟ್ರಪತಿ ಕಚೇರಿ ತಿಳಿಸಿದೆ.

275 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಪ್ರಚಂಡ ಅವರು 165 ಶಾಸಕರ ಬೆಂಬಲವನ್ನು ಹೊಂದಿದ್ದಾರೆ.ಇದರಲ್ಲಿ ಸಿಪಿಎನ್-ಯುಎಂಎಲ್ 78, ಸಿಪಿಎನ್-ಎಂಸಿ 32, ಆರ್‌ಎಸ್‌ಪಿ 20, ಆರ್‌ಪಿಪಿ 14, ಜೆಎಸ್‌ಪಿ 12, ಜನಮತ್ 6 ಮತ್ತು ನಾಗರೀಕ್ ಉನ್ಮುಕ್ತಿ ಪಾರ್ಟಿ 3 ಸೇರಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!