ಕ್ಯೂಆರ್‌ಎಸ್‌ಎಡಬ್ಲ್ಯು ಕ್ಷಿಪಣಿ ಪರೀಕ್ಷೆ ಯಶಸ್ವಿ: ಡಿಆರ್‌ಡಿಒಗೆ ಸಿಂಗ್ ಅಭಿನಂದನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೇಲ್ಮೈನಿಂದ ಆಗಸಕ್ಕೆ ಚಿಮ್ಮುವ ತ್ವರಿತ ಪ್ರತಿಕ್ರಿಯೆಯ ಕ್ಷಿಪಣಿ ವ್ಯವಸ್ಥೆ (ಕ್ಯೂಆರ್‌ಎಸ್‌ಎಡಬ್ಲ್ಯು)ಯ ಪರೀಕ್ಷೆ ಯಶಸ್ವಿಯಾಗಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ ಹಾಗೂ ಭಾರತೀಯ ಸೇನೆ ಜಂಟಿಯಾಗಿ ಗುರುವಾರ ಕ್ಷಿಪಣಿಗಳ ತುರ್ತು ಪ್ರತಿಕ್ರಿಯ ವ್ಯವಸ್ಥೆಯನ್ನು ಯಶಸ್ವಿ ಪರೀಕ್ಷೆಗೊಳಪಡಿಸಿದೆ. ಒಡಿಶಾದ ಕರಾವಳಿಯ ಚಂಡಿಪುರ ಭಾಗದಲ್ಲಿ 6 ವಿಮಾನಗಳ ಪರೀಕ್ಷಾ ಪ್ರಯೋಗ ಯಶಸ್ವಿಯಾಗಿದೆ.

ಇದು ಅತ್ಯಂತ ವೇಗವಾದ ಮತ್ತು ನಿಖರ ಗುರಿ ಹೊಂದಿದ ಕ್ಷಿಪಣಿ ನಿರೋಧಕ ವ್ಯವಸ್ಥೆಯಾಗಿದ್ದು, ಎಲ್ಲ ರೀತಿಯ ಸವಾಲುಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ. ಗರಿಷ್ಠ ಮಟ್ಟದ ವೇಗದ ವೈಮಾನಿಕ ಗುರಿಗಳ ವಿರುದ್ಧ ಈ ಪ್ರಯೋಗ ನಡೆಸಲಾಗಿದ್ದು, ಹಲವು ವಿಧದ ಅಪಾಯಗಳನ್ನು ಕೃತಕವಾಗಿ ಸೃಷ್ಟಿಸಿ ಕ್ಷಿಪಣಿ ವ್ಯವಸ್ಥೆಯನ್ನು ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ. ಕ್ಷಿಪಣಿ ವ್ಯವಸ್ಥೆ ನಿರೀಕ್ಷಿತ ಫಲಿತಾಂಶವನ್ನು ನೀಡಿದೆ ಎಂದು ಡಿಆರ್‌ಡಿಒ ಹೇಳಿದೆ.

ದೂರಗಾಮಿ ನಿಖರತೆ, ಹತ್ತಿರದ ಗುರಿ ಮತ್ತು ಎತ್ತರದ ಪ್ರದೇಶದಲ್ಲೂ ಈ ವ್ಯವಸ್ಥೆ ಕೆಲಸ ಮಾಡಲಿದೆ. ಕಡಿಮೆ ತೀವ್ರತೆಯ ರಾಡರ್ ತರಂಗಾಂತರಗಳನ್ನು ಆಧರಿಸಿ ಇದು ಗುರಿಯನ್ನು ಭೇದಿಸಬಲ್ಲದ್ದಾಗಿದೆ. ಹಗಲು ರಾತ್ರಿ ವೇಳೆಯಲ್ಲೂ ಸಮರ್ಥವಾಗಿ ಕೆಲಸ ನಿರ್ವಹಿಸಬಲ್ಲದು. ಡಿಆರ್‌ಡಿಒ ದೇಶೀ ತಂತ್ರಜನ ಆಧರಿಸಿ ಇದನ್ನು ರೂಪಿಸಲಾಗಿದೆ. ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್ ಡಿಒಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!