ಉದ್ಯಮಿ ಎಲೋನ್ ಮಸ್ಕ್ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಟ್ವಿಟರ್??

ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಉದ್ಯಮಿ ಎಲೋನ್ ಮಸ್ಕ್, ಟ್ವಿಟರ್ ಖರೀದಿಯಿಂದ ಹಿಂದೆ ಸರಿದಿರುವ ಹೇಳಿಕೆ ನೀಡಿದ ಬೆನ್ನಿಗೇ ಅವರ ವಿರುದ್ಧ ಮೊಕದ್ದಮೆ ಹೂಡುವುದಾಗಿ ಟ್ವಿಟರ್ ಆಡಳಿತ ಮಂಡಳಿ ತಿಳಿಸಿದೆ.
ಹೀಗೊಂದು ವೇಳೆ ನಡೆದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ಜಗತ್ತಿನ ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಮಾಧ್ಯಮದ ನಡುವಿನ ಬಹುದೊಡ್ಡ  ಕಾನೂನು ಹೋರಾಟಕ್ಕೆ ಇದು ನಾಂದಿ ಹಾಡಲಿದೆ.
ಸ್ಪ್ಯಾಮ್ ಖಾತೆಗಳ ಕುರಿತ ಡೇಟಾ ನೀಡಲು ಟ್ವಿಟರ್ ವಿಫಲವಾಗಿದೆ. ಹೀಗಾಗಿ 44 ಶತಕೋಟಿ ಡಾಲರ್‌ನ ಖರೀದಿ ಒಪ್ಪಂದ ಮುರಿದುಬಿದ್ದಿದೆ. ನಮ್ಮ ಹಲವು ವಿನಂತಿಗಳಿಗೆ ಪ್ರತಿಕ್ರಿಯಿಸಲು ಟ್ವಿಟರ್ ನಿರಾಕರಿಸಿದೆ. ಸೂಕ್ತ ಮಾಹಿತಿ ಒದಗಿಸಲಿಲ್ಲ. ಕೆಲವು ವಿನಂತಿಗಳನ್ನು ಅದು ಅಸಮರ್ಥನೀಯ ಕಾರಣ ಮುಂದಿಟ್ಟು ತಿರಸ್ಕರಿಸಿದೆ ಎಂದು ಮಸ್ಕ್ ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!