September 13, 2026
Sunday, September 13, 2026
spot_img

QUICK RECIPE | ಬ್ಯಾಚುಲರ್ಸ್‌ಗಾಗಿ ಸಿಂಪಲ್ ರೆಸಿಪಿ: ಹೋಟೆಲ್ ಸ್ಟೈಲ್ ಎಗ್ ಮಸಾಲಾ ರೋಸ್ಟ್ ಮಾಡುವ ಸರಳ ವಿಧಾನ ಇಲ್ಲಿದೆ

ಕೇವಲ 15 ನಿಮಿಷಗಳಲ್ಲಿ ತಯಾರಾಗುವ ‘ಮೊಟ್ಟೆ ಮಸಾಲಾ ರೋಸ್ಟ್’ ಚಪಾತಿ ಮತ್ತು ಬಿಸಿ ಅನ್ನಕ್ಕೆ ಸೂಕ್ತವಾದ ಅತ್ಯಂತ ಸುಲಭ ಹಾಗೂ ರುಚಿಕರವಾದ ರೆಸಿಪಿಯಾಗಿದೆ. ಮನೆಯಲ್ಲಿರುವ ಸಾಧಾರಣ ಮಸಾಲೆ ಪದಾರ್ಥಗಳನ್ನು ಬಳಸಿ, ಮಾಡುವ ಈ ರೆಸಿಪಿಯನ್ನು ಬ್ಯಾಚುಲರ್ಸ್ ಕೂಡ ಸುಲಭವಾಗಿ ಮಾಡಬಹುದು.

ಬೇಕಾಗುವ ಸಾಮಗ್ರಿಗಳು:
ಬೇಯಿಸಿದ ಮೊಟ್ಟೆಗಳು
ಈರುಳ್ಳಿ
ಟೊಮೆಟೊ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಅರಿಶಿನ ಪುಡಿ
ಅಚ್ಚಖಾರದ ಪುಡಿ
ಧನಿಯಾ ಪುಡಿ
ಕಾಳುಮೆಣಸಿನ ಪುಡಿ
ಎಣ್ಣೆ
ಸಾಸಿವೆ ಮತ್ತು ಜೀರಿಗೆ
ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು
ಉಪ್ಪು

ಮಾಡುವ ವಿಧಾನ :
ಮೊದಲು ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ. ಎಣ್ಣೆ ಕಾದ ನಂತರ ಸಾಸಿವೆ, ಜೀರಿಗೆ ಮತ್ತು ಕರಿಬೇವು ಹಾಕಿ ಸಿಡಿಸಿ. ನಂತರ ಹೆಚ್ಚಿದ ಈರುಳ್ಳಿಯನ್ನು ಹಾಕಿ ಅದು ತಿಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ 1 ನಿಮಿಷ ಬಾಡಿಸಿದ ಬಳಿಕ ಟೊಮೆಟೊ ಹಾಕಿ ಅದು ಮೃದುವಾಗುವವರೆಗೆ ಬೇಯಿಸಬೇಕು.

ನಂತರ ಉರಿ ಕಡಿಮೆ ಮಾಡಿ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಕಾಳುಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ಮಸಾಲಾ ಸೀದುಹೋಗದಿರಲು ಕೇವಲ 2 ಚಮಚ ನೀರು ಚಿಮುಕಿಸಿ, ಎಣ್ಣೆ ಬಿಡುವವರೆಗೆ 2 ನಿಮಿಷ ಬೇಯಿಸಬೇಕು. ನಂತರ ಸಿದ್ಧವಾದ ಮಸಾಲೆಯ ಮೇಲೆ ಕತ್ತರಿಸಿದ ಬೇಯಿಸಿದ ಮೊಟ್ಟೆಗಳನ್ನು ಮೆಲ್ಲಗೆ ಇಟ್ಟು. ಸಣ್ಣ ಉರಿಯಲ್ಲಿ 2 ನಿಮಿಷ ಬೇಯಲು ಬಿಡಬೇಕು, ಇದರಿಂದ ಮಸಾಲಾ ಮೊಟ್ಟೆಯೊಳಗೆ ಚೆನ್ನಾಗಿ ಇಳಿಯುತ್ತದೆ. 2 ನಿಮಿಷಗಳ ನಂತರ ಮೊಟ್ಟೆಗಳನ್ನು ಮೆಲ್ಲಗೆ ಇನ್ನೊಂದು ಬದಿಗೆ ತಿರುಗಿಸಿ ಹಾಕಿ, ಮೇಲಿಂದ ಕೊತ್ತಂಬರಿ ಸೊಪ್ಪು ಉದುರಿಸಿ ಮತ್ತೊಂದು ನಿಮಿಷ ಬೇಯಿಸಿದರೆ ಬಿಸಿಬಿಸಿಯಾದ ರುಚಿಕರ ಮುಟ್ಟೆ ಮಸಾಲಾ ರೋಸ್ಟ್ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !