May 14, 2026
Thursday, May 14, 2026
spot_img

ಅತಿಯಾಗಿ ಮುಸ್ಲಿಮರ ಓಲೈಕೆ ಮಾಡುವ ಯಾವ ಪಕ್ಷಕ್ಕೂ ಫ್ಯೂಚರ್‌ ಇಲ್ಲ: ಆರ್‌. ಅಶೋಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅತಿಯಾಗಿ ಮುಸ್ಲಿಮರ ಓಲೈಕೆ ಮಾಡುವ ಯಾವ ಪಕ್ಷಕ್ಕೂ ಭವಿಷ್ಯ ಇಲ್ಲ, ಜನ ಕಿತ್ತೆಸೆಯುತ್ತಾರೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದ್ದಾರೆ.

ಬಿಜೆಪಿ ಸರ್ಕಾರ ಜಾರಿ ಮಾಡಿದ್ದ ಹಿಜಾಬ್‌ ರೂಲ್ಸ್‌ನ್ನು ಕಾಂಗ್ರೆಸ್‌ ಸರ್ಕಾರ ತೆಗೆದು ಹಾಕಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಹಿಜಾಬ್‌ ವಿವಾದವಾದಾಗ ಬಿಜೆಪಿ ಸರ್ಕಾರ ಶಾಲಾ ಕಾಲೇಜುಗಳಿಗೆ ಯಾರೂ ಹಿಜಾಬ್‌ ಧರಿಸಿ ಬರುವಂತಿಲ್ಲ ಎಂದು ಸೂಚಿಸಿತ್ತು.

ಈ ನಿರ್ಧಾರವನ್ನು ಕಾಂಗ್ರೆಸ್‌ ಕಡೆಗಣಿಸಿ ಹಿಜಾಬ್‌ ಧರಿಸೋದಕ್ಕೆ ಅವಕಾಶ ಕೊಟ್ಟಿದೆ. ಆದರೆ ಹಿಂದುಗಳು ಕೇಸರಿ ಶಾಲ್‌ ಹಾಕೋದಕ್ಕೆ ಅನುಮತಿ ನೀಡಿಲ್ಲ. ಈ ನಿಯಮವನ್ನು ಮುಸ್ಲಿಮರ ಓಲೈಕೆ ಎಂದು ಬಿಜೆಪಿ ಗರಂ ಆಗಿದೆ.

ಶಾಲಾ ಕಾಲೇಜುಗಳಲ್ಲಿ ಜನಿವಾರ, ಶಿವನ ದಾರ, ರುದ್ರಾಕ್ಷಿ, ಟರ್ಬನ್‌, ಹಿಜಾಬ್‌ ಸೇರಿದಂತೆ ಯಾವುದೇ ಸ್ವರೂಪದ ಸಾಂಪ್ರದಾಯಿಕ ಸಂಕೇತವನ್ನು ಸಮವಸ್ತ್ರದ ಜೊತೆ ಧರಿಸಬಹುದು ಎಂದು ಹೇಳಿದೆ. ಈ ಬಗ್ಗೆ ಆರ್‌. ಅಶೋಕ್‌ ಮಾತನಾಡಿ, ಮುಸ್ಲಿಮರನ್ನು ಅತಿಯಾಗಿ ಓಲೈಕೆ ಮಾಡಿದ ಮಮತಾ ಬ್ಯಾನರ್ಜಿ ಸೋತಿದ್ದಾರೆ. ತಮಿಳುನಾಡಿನಲ್ಲಿ ಹಿಂದುಗಳನ್ನು ಬೈದ ಸ್ಟಾಲಿನ್‌ ಸೋತು ಸುಣ್ಣವಾದರು. ಮುಂದಿನ ಸರದಿ ಸಿದ್ದರಾಮಯ್ಯ ಸರ್ಕಾರದ್ದು ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !