September 23, 2026
Wednesday, September 23, 2026
spot_img

ರಾಘವೇಶ್ವರ ಶ್ರೀಗಳ ಅನ್ನಬ್ರಹ್ಮ ಚಾತುರ್ಮಾಸ್ಯ: ಪಟ್ಟೇಗಾರ ಸಮಾಜದಿಂದ ಸ್ವರ್ಣಪಾದುಕಾ ಪೂಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೋಕರ್ಣದ ಅಶೋಕೆಯಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಮೂಲಮಠ ಪರಿಸರದಲ್ಲಿ ನಡೆಯುತ್ತಿರುವ ಶ್ರೀ ರಾಘವೇಶ್ವರ ಸ್ವಾಮೀಜಿಯವರ ಅನ್ನಬ್ರಹ್ಮ ಚಾತುರ್ಮಾಸ್ಯದ ಹಿನ್ನೆಲೆಯಲ್ಲಿ ಮಂಗಳವಾರ ಉತ್ತರ ಕನ್ನಡದ ಪಟ್ಟೇಗಾರ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನಡೆಯಿತು.

ಪಾದುಕಾ ಪೂಜೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ಪಟ್ಟೇಗಾರ ಸಮಾಜವು ಪಾರಂಪರಿಕವಾಗಿ ಶ್ರೀಮಠದ ಗುರುಪರಂಪರೆಯನ್ನು ಅಶ್ರಯಿಸಿ ಬಂದಿದೆ. ತಲೆತಲಾಂತರದಿಂದ ನೀವು ಈ ಗುರುಪೀಠಕ್ಕೆ ನಿಮ್ಮ ಭಕ್ತಿಯನ್ನು ಸಮರ್ಪಿಸುತ್ತಾ ಬಂದಿದ್ದು, ಶ್ರೀಮಠವು ಸಮಾಜದ ನೋವುನಲಿವುಗಳ ಜೊತೆಗೆ ಇರಲಿದೆ ಎಂದು ಆಶೀರ್ವದಿಸಿದರು.

ಸಮಾಜದ ರಮಾನಂದ ದೇವರಾಜ ಶೆಟ್ಟಿ, ಲಂಬೋಧ ಜಯರಾಮ ಶೆಟ್ಟಿ, ದತ್ತಾತ್ರೇಯ ಶ್ರೀಧರ ಶೆಟ್ಟಿ, ಬಂಗಾರೇಶ್ವರ ಮಹಾಬಲೇಶ್ವರ ಶೇಟ್ಟಿ, ಶಂಕರ ಜನಾರ್ಧನ ಶೆಟ್ಟಿ ಸೇರಿದಂತೆ ನೂರಾರು ಸಮಾಜ ಬಂಧಿಗಳು ಉಪಸ್ಥಿತರಿದ್ದು, ಶ್ರೀಗಳ‌ ಆಶೀರ್ವಾದ ಪಡೆದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !