Saturday, February 4, 2023

Latest Posts

ಭಾರತೀಯ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಗೆ ಹುಟ್ಟುಹಬ್ಬದ ಸಂಭ್ರಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ಕ್ರಿಕೆಟ್‌ ಕ್ಷೇತ್ರದ ದಿಗ್ಗಜ ರಾಹುಲ್‌ ದ್ರಾವಿಡ್‌ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ.
1996ರ ಏಪ್ರಿಲ್‌ 3ರಂದು ಅಂತಾರಾಷ್ಟ್ರೀಯ ಒಡಿಐ ಮೂಲಕ ಕ್ರಿಕೆಟ್‌ ಗೆ ರಾಹುಲ್‌ ಪದಾರ್ಪಣೆ ಮಾಡಿದರು. 164 ಟೆಸ್ಟ್‌ ಪಂದ್ಯಗಳೊಂದಿಗೆ 13288 ರನ್‌ ಹಾಗೂ 344 ಒಡಿಐ ಪಂದ್ಯಗಳಿಂದ 10889 ರನ್‌ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 24,208 ರನ್‌ ಗಳಿಸಿದ್ದಾರೆ.
ಟೆಸ್ಟ್‌ ಪಂದ್ಯಗಳಲ್ಲಿ 36 ಶತಕ ಬಾರಿಸಿ, ಒಡಿಐ ನಲ್ಲಿ 12 ಶತಕ ಪಡೆದಿರುವುದು ವೃತ್ತಿ ಜೀವನದ ಸಾಧನೆಯಾಗಿದೆ.
ಭಾರತದ ಕ್ರಿಕೆಟ್‌ ಕೋಟ್‌ ರಾಹುಲ್‌ ದ್ರಾವಿಡ್‌ ಗೆ ಐಸಿಸಿ, ಬಿಸಿಸಿಐ ಸೇರಿ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ಆಟಗಾರನಿಗೆ ಶುಭ ಹಾರೈಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!