Sunday, December 4, 2022

Latest Posts

ರಾಹುಲ್‌ ಗಾಂಧಿ ಸಿದ್ದು-ಡಿಕೆಶಿ ಅವರನ್ನು ಜೋಡಿಸಲು ಬಂದಿದ್ದಾರೆ: ಸಚಿವ ಬೈರತಿ ಬಸವರಾಜ

ಹೊಸದಿಗಂತ ವರದಿ,ಗದಗ :

ರಾಹುಲ್‌ಗಾಂಧಿ ಅವರು ರಾಜ್ಯಕ್ಕೆ ಭಾರತ್ ಜೋಡೋ ಕಾರ್ಯಕ್ರಮಕ್ಕೆ ಬಂದಿಲ್ಲ ಅವರು ಸಿದ್ರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರನ್ನು ಜೋಡಿಸುವ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ ಅವರು ವ್ಯಂಗವಾಡಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರದಾನಿ ಮೋದಿ ಅವರು ವಿಶ್ವಮಟ್ಟದಲ್ಲಿ ಭಾರತ್ ಜೋಡಿಸುವುದನ್ನು ಈಗಾಗಲೆ ಮಾಡಿರುವದರಿಂದ ನಮಗೆ ಅದು ಅವಶ್ಯಕತೆಯಿಲ್ಲ ಎಂದರು ಹೇಳಿದರು.

ಆರ್‌ಎಸ್‌ಎಸ್ ದೇಶಭಕ್ತ ಸಂಸ್ಥೆಯಾಗಿರುವುದರಿಂದ ಅದನ್ನು ನಿಷೇಧಿಸಲು ಹೇಳುವ ವಿರೋಧಿಗಳಿಗೆ ತಲೆ ಸರಿಯಿಲ್ಲ ಎಂದು ಹೇಳಬಹುದು. ಕೇಂದ್ರ ಸರಕಾರ ದೇಶಕ್ಕೆ ಮಾರಕವಾದ, ದೇಶದ ವಿರೋಧ ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಸಂಘ-ಸಂಸ್ಥೆಗಳನ್ನು ಬ್ಯಾನ್ ಮಾಡಿದೆ. ಆರ್‌ಎಸ್‌ಎಸ್ ದೇಶದ ವಿರುದ್ದ ಒಂದೇ ಒಂದು ಚಟುವಟಿಕೆಯಲ್ಲಿ ಪಾಲ್ಗೊಂಡಿರುವ ದಾಖಲೆಗಳನ್ನು ತೋರಿಸಲಿ ಎಂದು ತಿರುಗೇಟು ನೀಡಿದ ಅವರು ಕಾಂಗ್ರೆಸ್‌ನವರು ಓಟ್ ಬ್ಯಾಂಕಿಗಾಗಿ ಬ್ಯಾನರ್ ಹರಿದು ಆರೋಪವನ್ನು ಬಿಜೆಪಿ ಕಾರ್ಯಕರ್ತರ ಮೇಲೆ ಹಾಕುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಸ್ವಾಭಿಮಾನಿಗಳು ಎಂದು ಸಚಿವ ಬೈರತಿ ಬಸವರಾಜ ಅವರು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!