ರಾಹುಲ್ ಉತ್ತಮ ಬ್ಯಾಟರ್ ಅಷ್ಟೇ ಅಲ್ಲ, ಉತ್ತಮ ಕ್ಯಾಪ್ಟನ್ ಕೂಡ: ಗೌತಮ್ ಗಂಭೀರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆ.ಎಲ್. ರಾಹುಲ್ ನಾಯಕತ್ವದ ಬಗ್ಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮಾತನಾಡಿದ್ದಾರೆ.
15 ನೇ ಆವೃತ್ತಿಯಲ್ಲಿ ರಾಹುಲ್ ಐಪಿಎಲ್ ಲಖನೌ ತಂಡ ಮುನ್ನಡೆಸಲಿದ್ದಾರೆ. ರಾಹುಲ್ ಉತ್ತಮ ಬ್ಯಾಟರ್ ಅಷ್ಟೇ ಅಲ್ಲ, ಉತ್ತಮ ನಾಯಕ ಖಂಡಿತಾ ಹೌದು ಎಂದಿದ್ದಾರೆ. ಲಖನೌ ಟೀಂನಲ್ಲಿ ರವಿ ಬಿಷ್ನೋಯಿ ಮತ್ತು ಮಾರ್ಕಸ್ ಸ್ಟೋಯಿನಿಸ್ ಇದ್ದಾರೆ. ಈ ಮೂರು ಮಂದಿ ಲಖನೌ ಟೀಂನ ಮ್ಯಾಚ್ ವಿನ್ನರ‍್ಸ್ ಎಂದು ಟೀಂ ಮೆಂಟರ್ ಗಂಭೀರ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಹಾಗೂ ಏಕದಿನ ಪಂದ್ಯಗಳ ರಾಹುಲ್ ನಾಯಕತ್ವದಲ್ಲಿ ತಂಡ ಸೋಲು ಅನುಭವಿಸಿತ್ತು. ರಾಹುಲ್ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿದ್ದು, ಗಂಭೀರ್ ರಾಹುಲ್ ಉತ್ತಮ ನಾಯಕ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!