ಕೋವಿಡ್ ಸಂಬಂಧಿ ಔಷಧಗಳಿಗೆ ಬೇಡಿಕೆಯೇ ಇಲ್ಲ, ಪ್ಯಾರಾಸಿಟಮಾಲ್ ಸಾಕಾಗಿದೆ ಮೂರನೇ ಅಲೆ ಸೋಂಕಿಗೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೋವಿಡ್ ಮೂರನೇ ಅಲೆಯ ‘ಒಮಿಕ್ರಾನ್ ಪರ್ವ’.ಘಾತಕವಲ್ಲ ಎಂಬುದಕ್ಕೆ ಅದಾಗಲೇ ಹಲವು ನಿದರ್ಶನಗಳು ಕಣ್ಣಮುಂದಿವೆ. ತಜ್ಞವೈದ್ಯರೆನಿಸಿಕೊಂಡಿರುವ ದೇವಿಶೆಟ್ಟಿ ಸಹ, ಪಾಸಿಟಿವ್ ಪ್ರಕರಣಗಳನ್ನು ಲೆಕ್ಕ ಹಾಕುತ್ತ ಜನರನ್ನು ಗಾಬರಿಗೆ ಬೀಳಿಸುವುದನ್ನು ಬಿಡಬೇಕು ಎಂದಿರುವ ಉದಾಹರಣೆ ಕಣ್ಣಮುಂದಿದೆ. ಇದೀಗ ಫಾರ್ಮಾ ವಿಭಾಗ ಸಹ ಮೂರನೇ ಅಲೆಯ ದುರ್ಬಲತೆಗೆ ಸಾಕ್ಷಿ ಹೇಳುತ್ತಿದೆ.
ಕೋವಿಡ್ ಎರಡನೇ ಅಲೆ ಡೆಲ್ಟಾ ಬಂದಾಗ ಯಾವೆಲ್ಲ ಔಷಧಗಳು ಬೇಡಿಕೆಯಲ್ಲಿದ್ದವೋ ಅವ್ಯಾವವೂ ಈಗ ಬೇಡಿಕೆ ಪಡೆದಿಲ್ಲ ಎಂದು ಫಾರ್ಮಾ ಕ್ಷೇತ್ರದ ದಿಗ್ಗಜ ಕಂಪನಿ ಸಿಪ್ಲಾ ಹೇಳಿದೆ. ರೆಂಡಿಸಿವಿರ್, ಟಾಸಿಲಿಜುಮಾಬ್, ಫಾವಿಪಿರಾವಿರ್ ಈ ಥರದ ಯಾವುದೇ ಔಷಧಗಳಿಗೂ ಅಂಥ ಬೇಡಿಕೆಯೇನೂ ಇಲ್ಲ ಎಂದು ಸಿಪ್ಲಾ ಹೇಳಿದೆ. ಇವೆಲ್ಲ ಡೆಲ್ಟಾ ಅಲೆ ಬಂದ ಸಂದರ್ಭದಲ್ಲಿ ಅತಿ ಬೇಡಿಕೆಯಲ್ಲಿದ್ದ ಔಷಧಗಳಾಗಿದ್ದವು. ಜನ ಹತ್ತುಪಟ್ಟು ಬೆಲೆ ತೆತ್ತು ಖರೀದಿಸಿದ್ದೂ ಇತ್ತು.
ಸೋಂಕು ತೀವ್ರವಾಗಿ ಹಬ್ಬುತ್ತ ಜನರಲ್ಲಿ ನೆಗಡಿ-ಕೆಮ್ಮು-ಜ್ವರಗಳನ್ನು ಉಂಟುಮಾಡುತ್ತಿದೆಯಾದರೂ ಹೆಚ್ಚಿನವರು ಔಷಧ ಅಂಗಡಿಗಳಲ್ಲೇ ಸಮಾಧಾನ ಕಂಡುಕೊಳ್ಳುತ್ತಿದ್ದಾರೆ. ಆಸ್ಪತ್ರೆಗೆ ಬರಬೇಕಾದ ಪ್ರಮೇ, ಕಡಿಮೆ. ಹೀಗಾಗಿ ಪ್ಯಾರಾಸಿಟಮಾಲ್ ಶ್ರೇಣಿಯ ಮಾತ್ರೆಗಳು ಹಾಗೂ ಮಲ್ಟಿವಿಟಾಮಿನ್ ಮಾತ್ರೆಗಳಿಗೆ ಈಗಲೂ ಬೇಡಿಕೆ ಇದೆ ಎಂದಿದೆ ಸಿಪ್ಲಾ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!