Thursday, December 8, 2022

Latest Posts

ರಸ್ತೆಯಲ್ಲಿ ಫುಟ್ಬಾಲ್ ಆಡುತ್ತಾ ಸಾಗುತ್ತಿರುವ ರಾಹುಲ್ ಗಾಂಧಿಯ ಯಾತ್ರೆ: ವಿಡಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಇಂದು ಚೌಟಕೂರಿನಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರಂಭಿಸಿದ ಪಾದಯಾತ್ರೆಯಲ್ಲಿ ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಹುಲ್, ರೇವಂತ್ ರೆಡ್ಡಿ ಮತ್ತಿತರ ಮುಖಂಡರು ರಸ್ತೆಯಲ್ಲಿ ಫುಟ್ಬಾಲ್ ಆಡುತ್ತಲೇ ಪಾದಯಾತ್ರೆ ಮುಂದುವರಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಕಾಂಗ್ರೆಸ್ ಪಕ್ಷ ಪೋಸ್ಟ್ ಮಾಡಿದೆ.

ಇಂದು ಬೆಳಗ್ಗೆ ದಾನಂಪಲ್ಲಿಯಲ್ಲಿ ಪಾದಯಾತ್ರೆಗೆ ವಿರಾಮ ನೀಡಲಾಯಿತು. ಸದ್ಯದಲ್ಲೇ ವರದದ್ದಾಪುರದಲ್ಲಿ ಕಾರ್ನರ್ ಮೀಟಿಂಗ್ ನಡೆಯಲಿದೆ. ಇಂದು ಅಲ್ಲಾದುರ್ಗ ಬಳಿ ರಾಹುಲ್ ಗಾಂಧಿ ವಾಸ್ತವ್ಯ ಹೂಡಲಿದ್ದಾರೆ. ತಮಿಳುನಾಡು, ಕರ್ನಾಟಕ ಮತ್ತು ಎಪಿಯಲ್ಲಿ ಈಗಾಗಲೇ ರಾಹುಲ್ ಪಾದಯಾತ್ರೆ ಮುಕ್ತಾಯವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!