June 26, 2026
Friday, June 26, 2026
spot_img

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರದಿಂದ ರೈಲ್ವೆ ಅತಿಕ್ರಮಣ ತೆರವು: ಬೀದರಿನಲ್ಲಿ ನೋಟಿಸ್ ನೀಡಿದರೂ ಕ್ಯಾರೆ ಎನ್ನದ ಜಿಲ್ಲಾಡಳಿತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೀದರ್: ಇತ್ತಿಚೆಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಲ್ಲಿನ ಮುಖ್ಯಮಂತ್ರಿ ಸುಬೆಂಧು ಅಧಿಕಾರಿ ರೈಲ್ವೆ ಜಮೀನು ಅತಿಕ್ರಮಣ ತೆರವು ನಡೆಸಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಬೀದರಿನಲ್ಲಿ ಕಳೆದ ಐವತ್ತು ವರ್ಷಗಳಿಂದ ರೈಲ್ವೆ ಜಮೀನು ಅತಿಕ್ರಮಣ ನಡೆಸಿದವರ ವಿರುದ್ಧ ಕ್ರಮ ವಹಿಸಲು ಕೋರ್ಟ್ ಆದೇಶದಂತೆ ಅತಿಕ್ರಮಣ ನಡೆಸಿ ಕಟ್ಟಲಾದ ಕಟ್ಟಡಗಳನ್ನು ತೆರವುಗೊಳಿಸುವಂತೆ ರೈಲ್ವೆ ಅಧಿಕಾರಿಗಳು ನೋಟಿಸ್ ನೀಡಿದರು ಸಹ ಜಿಲ್ಲಾಡಳಿತ ಅತಿಕ್ರಮಣ ತೆರವಿಗೆ ಮುಂದಾಗುತ್ತಿಲ್ಲ, ಇದು ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಗೆ ಮಾಧ್ಯಮ ಗೋಷ್ಠಿಯಲ್ಲಿ ಅನೇಕ ಬಾರಿ ಪ್ರಶ್ನೆ ಮಾಡಿದರು ಈ ಕುರಿತು ಮಾಹಿತಿ ಇಲ್ಲ ಎಂದು ಉತ್ತರಿಸಿದ್ದರು. ನಗರದ ಹೃದಯ ಭಾಗದಲ್ಲಿ ಸರ್ಕಾರಿ ಜಮೀನು ಹಾಡು ಹಗಲೇ ಅತಿಕ್ರಮಣ ನಡೆಸಿದ್ದು ಕಣ್ಣಿಗೆ ಕಾಣುತ್ತಿದ್ದರೂ ಕಾನೂನಿನ ಪ್ರಕಾರ ಕ್ರಮ ವಹಿಸಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿರುವುದು ನೋಡಿದರೆ ಸರ್ಕಾರಿ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಈ ಅಕ್ರಮದ ಹಿಂದೆ ಶಾಮೀಲಾಗಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ. ಪಶ್ಚಿಮ ಬಂಗಾಳ ಸರ್ಕಾರ ಅತಿಕ್ರಮಣ ತೆರವು ನಡೆಸಿ ಮಾದರಿಯಾದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಅತಿಕ್ರಮಣ ನಡೆಸಿದವರ ಮೇಲೆ ಮೃದು ಧೋರಣೆ ವಿಪರ್ಯಾಸ ಸಂಗತಿ.

ರೈಲ್ವೆ ಜಮೀನು ಅತಿಕ್ರಮಣ: 40 ಜನರಿಗೆ ಶೋಕಾಸ್ ನೋಟಿಸ್

ಅತಿಕ್ರಮಣ ಹಿನ್ನೆಲೆ:

ನಗರದ ಗುಲ್ಲರ್ ಹವೇಲಿ ಸರ್ವೇ ನಂಬರ್ 31 ಈಗಿನ ನಂದಿ ಕಾಲೋನಿ ಹಾಗೂ ಜ್ಯೋತಿ ಕಾಲೋನಿಯಲ್ಲಿ ಅತಿಕ್ರಮಣ ಮಾಡಿರುವ 40 ನಿವಾಸಿಗಳಿಗೆ ರೈಲ್ವೆ ಇಲಾಖೆ ಜಾಗ ಖಾಲಿ ಮಾಡುವಂತೆ ಶೋಕಾಸ್ ನೋಟಿಸ್ ನೀಡಿತ್ತು. ಕಳೆದ ವರ್ಷ ಡಿಸೆಂಬರ್16ರ ಒಳಗಾಗಿ ಸ್ವತ್ತಿನ ದಾಖಲೆಗಳನ್ನು ಪ್ರಸ್ತುತ ಪಡಿಸುವಂತೆ ನವ್ಹೆಂಬರ್ 28 ರಂದು CW/277/Land cell/enchrochment/Bidar/ Sl No. 14 ನೋಟಿಸ್ ನಲ್ಲಿ ತಿಳಿಸಲಾಗಿತ್ತು.

ಜಾಗ ಖಾಲಿ ಮಾಡದ ಕಾರಣ ಸಾರ್ವಜನಿಕ ಸ್ವತ್ತುಗಳ ಅನಧಿಕೃತ ಅತಿಕ್ರಮಣ ತೆರವು ಕಾನೂನು 1971 ಸೆಕ್ಷನ್ (೧), ಸಬ್ ಸೆಕ್ಷನ್ (೫) ರ ಪ್ರಕಾರ ಅತಿಕ್ರಮಣ ಮಾಡಿರುವ ಜಾಗ ಖಾಲಿ ಮಾಡುವಂತೆ ಇಲ್ಲವಾದಲ್ಲಿ ಡೆಮಾಲಿಶ್ ಮಾಡಲಾಗುವುದು ಎಂದು ಸಿಕಿಂದರಾಬಾದ್ ದಕ್ಷಿಣ ಮಧ್ಯ ರೈಲ್ವೆ ಡಿವಿಜನಲ್ ಅಧಿಕಾರಿ (ಇನ್ಫ್ರಾ) ಡಿಸೆಂಬರ್ 30 2025ರಂದು ನೋಟಿಸ್ ಕೊನೆಯ ನೋಟಿಸ್ ನೀಡಿದ್ದರು.

ಇದನ್ನೂ ಓದಿ:

ನೋಟಿಸ್ ಗೆ ಉತ್ತರ ನೀಡಲು ಅವಧಿ ಮುಗಿದಿದ್ದು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಮನೆಗಳ ಡೆಮಾಲಿಶ್ ಮಾಡಲು ಜೆಸಿಬಿ ತಂದು ಆದಷ್ಟು ಬೇಗ ಅತಿಕ್ರಮಣ ಖಾಲಿ ಮಾಡಿಸಲಾಗುವುದು ಎಂದು ರೈಲ್ವೆ ಅಧಿಕಾರಿ ಹೊಸ ದಿಗಂತಕ್ಕೆ ಮಾತನಾಡಿ ತಿಳಿಸಿದ್ದರು.

ರೈಲ್ವೆ ಜಮೀನು ಇರುವ ಮಾಹಿತಿ ಇದ್ದರೂ ದಶಕಗಳಿಂದ ಅಕ್ರಮವಾಗಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದವರು ಇಂದು ತಮ್ಮದೇ ಮಾಡಿದ ತಪ್ಪಿಗೆ ಖೆಡ್ಡಾಗೆ ಬಿದ್ದಿದ್ದಾರೆ. ಜಿಲ್ಲಾಡಳಿತ ಅತಿಕ್ರಮಣ ತೆರವಿಗೆ ದಿಟ್ಟ ಕ್ರಮ ಕೈಗೊಳ್ಳುತ್ತಾ ಕಾದು ನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !