October 15, 2026
Thursday, October 15, 2026
spot_img

WEATHER | ರಾಜ್ಯದಲ್ಲಿ ಬೆಳಗ್ಗೆ-ಸಂಜೆ ಮಳೆ, ಮಧ್ಯಾಹ್ನ ಅತಿಯಾದ ಬಿಸಿಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಭಾರೀ ಮಳೆ ಆಗಲಿದೆ. ಈ ಮಳೆ ಬೆಳಗ್ಗೆ ಹಾಗೂ ಸಂಜೆ ಮಾತ್ರ ಇರಲಿದ್ದು, ಉಳಿದ ಸಮಯದಲ್ಲಿ ಬಿರುಬಿಸಿಲು ಮಾತ್ರ ಸುಡಲಿದೆ.

ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಬಿರುಗಾಳಿ, ಮಿಂಚು ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಕರ್ನಾಟಕ ಭಾಗದ ಜನರಿಗೆ ಮಳೆಯ ಸಾಧ್ಯತೆ ಕಡಿಮೆ ಇದೆ. ಇಲ್ಲಿ ಹೆಚ್ಚು ಬಿಸಿಲಿನ ಬೇಗೆ ಇರಲಿದ್ದು, ಜನ ಆರೋಗ್ಯದ ಕಡೆ ಗಮನಹರಿಸಬೇಕಿದೆ.

Must Read