Wednesday, February 8, 2023

Latest Posts

ಜ.16ರಂದು ಜೆಡಿಎಸ್ ನಿಂದ ರೈತ ಸಂಕ್ರಾಂತಿ ಉತ್ಸವ: ಕುಮಾರಸ್ವಾಮಿ

ಹೊಸದಿಗಂತ ವರದಿ, ಕಲಬುರಗಿ:

ಜನವರಿ 16ರಂದು ಜೆಡಿಎಸ್ ಪಕ್ಷದ ವತಿಯಿಂದ ಸಂಜೆ ರೈತ ಸಂಕ್ರಾಂತಿ ಉತ್ಸವ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಬುಧವಾರ ಜಿಲ್ಲೆಯ ಸೇಡಂ ತಾಲೂಕಿನ ನಿಡಗುಂದಾ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,16ರಂದು ಆನ್ಲೈನ್ ವೇದಿಕೆ ಮೂಲಕ ರಾಜ್ಯದ ಐವತ್ತಕ್ಕಿಂತ ಅಧಿಕ ವಿಧಾನಸಭಾ ಕ್ಷೇತ್ರದ ರೈತರ ಜೊತೆಗೆ ಸಂವಾದ ನಡೆಸಲಿದ್ದೇನೆ.ಕೃಷಿ ವಲಯದ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ನನ್ನ ಉದ್ದೇಶವಾಗಿದೆ ಎಂದರು.

ಸೇಡಂ ವಿಧಾನಸಭಾ ಕ್ಷೇತ್ರದ ಸುಲೇಪೆಟನಲ್ಲಿ ಪಂಚರತ್ನ ಯಾತ್ರೆಯ ಸಂದರ್ಭದಲ್ಲಿ ರೈತ ಸಂಕ್ರಾಂತಿ ಉತ್ಸವದ ಲಾಂಛನವನ್ನು ಬಿಡುಗಡೆ ಮಾಡಿದರು. ಈ ಅಥ೯ಪೂರ್ಣ ಕಾಯ೯ಕ್ರಮದಲ್ಲಿ ಅನ್ನದಾತರು ದೊಡ್ಡ ಪ್ರಮಾಣದಲ್ಲಿ ಭಾಗಿಯಾಗಬೇಕು ಎಂದು ವಿನಂತಿಸಿದರು.

ಕಲಬುರಗಿ ಜಿಲ್ಲೆಯಲ್ಲಿ 7 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಭಾಗದ ರೈತರಿಗೆ ಈ ಸಕಾ೯ರದಲ್ಲಿ ಪರಿಹಾರ ಹಣ ಸಿಗಲಿಲ್ಲ. ಆದರೆ, ನಮ್ಮ ಸಕಾ೯ರ ಮೂರು ತಿಂಗಳಲ್ಲಿ ಅಧಿಕಾರಕ್ಕೆ ಬರಲಿದ್ದು,ಯಾವೊಬ್ಬ ರೈತರು ಆತ್ಮಹತ್ಯೆ ಗೆ ಶರಣಾಗಬಾರದು ಎಂದು ಮನವಿ ಮಾಡಿದರು.

ರೈತರ ಬದುಕಿಗೆ ಉತ್ತಮ ವಾತಾವರಣ ನಿರ್ಮಾಣ ಮಾಡಿ ಕೊಡುವ ಸಂಕಲ್ಪ ಮಾಡಿದ ಅವರು,ಸಾಲ ಮನ್ನಾ ಮಾಡುವ ಕೆಲಸವಾಗಿದೆ.ಇನ್ನೇನಿದ್ದರೂ ರೈತರಿಗೆ ಎಲ್ಲಾ ರೀತಿಯ ಅನುಕೂಲ ಕಲ್ಪಿಸುವ ಕೆಲಸ ಆಗಬೇಕಿದೆ ಎಂದರು.

193 ಕೋಟಿ ಬೆಳೆ ವಿಮೆಯನ್ನು ರೈತರು ಕಟ್ಟಿದ್ದು,ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಹೆಸರಿನಲ್ಲಿ ಸಕಾ೯ರ ರೈತರಿಗೆ ವಂಚನೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಭೋಜೆಗೌಡ,ಕ್ಷೇತ್ರದ ಅಭ್ಯರ್ಥಿ ಬಾಲರಾಜ್ ಗುತ್ತೇದಾರ, ಜಿಲ್ಲಾಧ್ಯಕ್ಷ ಸುರೇಶ್ ಮಹಾಗಾಂವಕರ್ ಇತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!