ಬೀದಿಗೆ ಬಿತ್ತು ರಾಖಿ ಸಾವಂತ್ ಪರ್ಸನಲ್ ಲೈಫ್, ಗಂಡನ ವಿರುದ್ಧ ದೂರು ದಾಖಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಾಖಿ ಸಾವಂತ್ ದಾಂಪತ್ಯ ಜೀವನ ಬೀದಿಗೆ ಬಿದ್ದಿದ್ದು, ಊರೆಲ್ಲಾ ಅವರ ಬಗ್ಗೆ ಮಾತನಾಡುವಂತಾಗಿದೆ.

ಇನ್ನೇನು ಎಲ್ಲವೂ ಸುಖಾಂತ್ಯದಲ್ಲಿದೆ ಎನ್ನುವಾಗ ಆದಿಲ್ ರಾಖಿ ನನಗೆ ತುಂಬಾ ತೊಂದರೆ ಕೊಟ್ಟಿದ್ದಾರೆ, ಮರ್ಯಾದೆ ತೆಗೆದಿದ್ದಾರೆ ಎಂದು ಹೇಳಿದ್ದಾರೆ. ಹೇಳಿದ್ದೇ ತಡ ರಾಖಿ, ಆದಿಲ್‌ಗೆ ಬೇರೆ ಹುಡುಗಿ ಜತೆ ಸಂಬಂಧ ಇದೆ, ಅದಕ್ಕೆ ನಮ್ಮ ಮದುವೆ ವಿಷಯ ಮುಚ್ಚಿಟ್ಟಿದ್ರು ಎಂದು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದರು. ಈ ಜಗಳ ತಾರಕಕ್ಕೇರಿದ್ದು, ದಿನದಿಂದ ದಿನಕ್ಕೆ ಹೊಸ ಹೊಸ ದೂರುಗಳು ಹೊರಬರುತ್ತಲೇ ಇವೆ. ಪತಿ ವಿರುದ್ಧ ರಾಖಿ ಮುಂಬೈನ ಓಶಿವಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಗಂಡ ಮೋಸ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!