ಸಿರಿಯಾ ದುರಂತ: ಅವಶೇಷಗಳಡಿ ಮಗುವಿಗೆ ಜನ್ಮ ನೀಡಿ ಪ್ರಾಣ ಬಿಟ್ಟ ಮಹಿಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹುಟ್ಟು ಸಾವು ಹೇಗೆ ಸಂಭವಿಸುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. “ಕಣ್ಣು ತೆರೆದರೆ ಹುಟ್ಟು, ಕಣ್ಣು ಮುಚ್ಚಿದರೆ ಸಾವು” ಈ ಪದದ ಹಿಂದಿನ ಅರ್ಥವನ್ನು ತಿಳಿಯಲು ಮನುಷ್ಯರಿಗೆ ಸಾಧ್ಯವಿಲ್ಲ. ಈ ಹುಟ್ಟು ಸಾವುಗಳೆರಡರ ನಡುವೆ ಪ್ರಕೃತಿ ಬೇರೆ ಪಾತ್ರವನ್ನು ನಿರ್ಣಯಿಸಿರುತ್ತದೆ. ಅಂತಹ ಹೃದಯವಿದ್ರಾವಕ ಘಟನೆಯೆಂದರೆ ಸಿರಿಯಾದಲ್ಲಿ ಸಂಭವಿಸಿದ ಭೂಕಂಪನ ದುರಂತ. ಮಗುವಿಗೆ ಜನ್ಮ ನೀಡಿ ಆ ತಾಯಿ ಅವಶೇಷಗಳಡಿಯಲ್ಲೇ ಶಾಶ್ವತವಾಗಿ ಕಣ್ಣು ಮುಚ್ಚಿದ್ದಾರೆ. ಸಿರಿಯಾದ ಭೂಕಂಪದ ಅವಶೇಷಗಳು ಒಂದು ಜನನ ಮತ್ತು ಇನ್ನೊಂದು ಸಾವಿಗೆ ಜೀವಂತ ಸಾಕ್ಷಿಯಾಗಿದೆ.

ಭೂಕಂಪದಿಂದ ನಡುಗುತ್ತಿರುವ ಸಿರಿಯಾದಲ್ಲಿ ಸೃಷ್ಟಿ ನಾಶವಷ್ಟೇ ಅಲ್ಲ ಜನ್ಮಗಳ ಸಾವಿಗೆ ಕಾರಣವಾದ ಘಟನೆ ನಡೆದಿದೆ. ಒಂದೆಡೆ ಶವಗಳ ರಾಶಿ. ಇನ್ನೊಂದು ಕಡೆ ಈಗಷ್ಟೇ ಈ ಭೂಮಿಗೆ ಬಂದ ಮಗು. ಕಷ್ಟಕಾಲದಲ್ಲೂ ಬೆಳಕಿನ ಗೆರೆಯನ್ನು ಪಸರಿಸಲು ಯತ್ನಿಸಿದ ಆ ತಾಯಿ ಸಿರಿಯಾ ಭೂಕಂಪದ ಅವಶೇಷಗಳಡಿ ತನ್ನ ಮಗುವಿಗೆ ಜನ್ಮ ನೀಡಿದ್ದಾಳೆ.

ಟರ್ಕಿ ಮತ್ತು ಸಿರಿಯಾದಲ್ಲಿ ಎಲ್ಲಿ ನೋಡಿದರೂ ಕಟ್ಟಡಗಳ ಅವಶೇಷಗಳು ಶವಗಳ ದಿಬ್ಬಗಳನ್ನು ನೆನಪಿಸುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಭೂಕಂಪಕ್ಕೆ ಸಂಬಂಧಿಸಿದ ದೃಶ್ಯಗಳು ಹೃದಯ ಕಲಕುವಂತಿವೆ. ಗಟ್ಟಿ ಹೃದಯದ ಜನರಲ್ಲೂ ಕಣ್ಣೀರು ತರಿಸುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಗುವೊಂದು ಈ ಭೂಮಿಗೆ ಬಂದಿದೆ.

ಸಿರಿಯಾದ ಅಲೆಪ್ಪೊದಲ್ಲಿ ಭೂಕಂಪದ ಅವಶೇಷಗಳ ನಡುವೆ ತಾಯಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಅವಶೇಷಗಳನ್ನು ತೆಗೆಯುವ ಸಂದರ್ಭದಲ್ಲಿ ಇದನ್ನು ಗಮನಿಸಿದ ಸ್ಥಳೀಯರು ಮಗುವನ್ನು ತಕ್ಷಣ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!