ಕಮಲ್‌ ಹಾಸನ್‌ ಇಂಡಿಯನ್‌-2 ಸಿನಿಮಾಕ್ಕೆ ರಕುಲ್ ಪ್ರೀತ್ ನಾಯಕಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಕ್ರಮ್‌ ಯಶಸ್ಸಿನ ಬಳಿಕ ಕಮಲ್‌ ಹಾಸನ್‌ (Kamal Haasan) ಅವರ ಇಂಡಿಯನ್‌-2 ಸಿನಿಮಾದಲ್ಲಿ ಕಾಣಲಿದ್ದು, ಕಮಲ್‌ಗೆ ನಾಯಕಿಯಾಗಿ ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಎಂಟ್ರಿ ಕೊಟ್ಟಿದ್ದಾರೆ.

ಈಗಾಗಲೇ ರಕುಲ್ ಅಭಿನಯದ ʻಛತ್ರಿವಾಲಿʼ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಅವರ ಅಭಿನಯಕ್ಕೆ ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಇಂಡಿಯನ್‌-2 ಸಿನಿಮಾಗೆ ರಕುಲ್‌ ನಾಯಕಿಯಾಗಿ ಮಿಂಚಲಿದ್ದಾರೆ.

ʻʻಇಂಡಿಯನ್ 2’ನಲ್ಲಿ ನಟಿಸಲು ಕಾಯುತ್ತಿದ್ದೇನೆ. ಕಮಲ್‌ ಹಾಸನ್‌ ಅವರ ಜತೆ ನಾನು ಕೆಲಸ ಮಾಡುವ ಅವಕಾಶವನ್ನು ಪಡೆದಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ” ಎಂದು ರಾಕುಲ್ ಹೇಳಿದ್ದಾರೆ. ಯಶಸ್ಸಿಗೆ ಯಾವುದೇ ಶಾರ್ಟ್‌ಕಟ್‌ಗಳಿಲ್ಲ. ನಿಮ್ಮ ಕೆಲಸದ ಬಗ್ಗೆ ನೀವು ತುಂಬಾ ಉತ್ಸಾಹದಿಂದಿರಬೇಕು. ಏಕೆಂದರೆ ಅದು ನಿಮಗೆ ಸಾಧ್ಯವಾಗುವ ಏಕೈಕ ಮಾರ್ಗವಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!