ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 11 ದಿನಗಳ ಕಠಿಣ ವೃತ ಕೈಗೊಂಡು ಶದ್ಧಾ ಭಕ್ತಿಯಿಂದ ನೆರವೇರಿಸಿದ್ದರು.
ಆದ್ರೆ ಕಾಂಗ್ರೆಸ್ ನಾಯಕ ರಾಮ ಮಂದಿರ ವಿಚಾರದಲ್ಲಿ ಪ್ರದಾನಿ ಮೋದಿ ನಡೆಯನ್ನೇ ಪ್ರಶ್ನಿಸಿದ್ದು , ಮೋದಿ ಶಿಷ್ಟಾಚಾರ ಪಾಲಿಸದ ಕಾರಣ ಅಪವಿತ್ರಗೊಂಡಿರುವ ರಾಮ ಮಂದಿರವನ್ನು ಇಂಡಿಯಾ ಮೈತ್ರಿ ಅಧಿಕಾರಕ್ಕೆ ಬಂದರೆ ಪವಿತ್ರ ಮಾಡಲಾಗುವುದು ಎಂದು ಹೇಳಿದ್ದಾರೆ.
ಈ ಕುರಿತು ನಾಲಿಗೆ ಹರಿಬಿಟ್ಟ ಮಹಾರಾಷ್ಟ್ರ ಅಧ್ಯಕ್ಷ ನಾನಾ ಪಟೊಲ್, ರಾಮ ಮಂದಿರ ನಿರ್ಮಾಣದಲ್ಲಿ ಪ್ರಧಾನಿ ಮೋದಿ ಪ್ರೊಟೋಕಾಲ್ ಪಾಲಿಸಿಲ್ಲ. ಮೋದಿ ಮಾಡಿದ ತಪ್ಪವನ್ನು ಕಾಂಗ್ರೆಸ್ ಸರಿಪಡಿಸಲಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ವಿರೋಧ ವ್ಯಕ್ತಪಡಿಸಿದ್ದ ನಾಲ್ವರು ಶಂಕರಾಚಾರ್ಯ ಮಠಾಧಿಪತಿಗಳನ್ನು ಕರೆಯಿಸಿ ಅವರ ಕೈಯಿಂದ ರಾಮ ಮಂದಿರ ಶುಚಿತ್ವಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣದಲ್ಲಿ ಮೋದಿ ಹಲವು ತಪ್ಪು ಮಾಡಿದ್ದಾರೆ. ಶಿಷ್ಟಾಚಾರ ಪಾಲಿಸಿಲ್ಲ. ಹೀಗಾಗಿ ಶಂಕಾರಾಚಾರ್ಯ ಮಠದ ಸ್ವಾಮೀಜಿಗಳು ಪ್ರಾಣಪ್ರತಿಷ್ಠೆಗೆ ವಿರೋಧ ವ್ಯಕ್ತಪಡಿಸಿದ್ದರು. ಮೋದಿ ಮಾಡಿದ ತಪ್ಪುಗಳಿಂದ ರಾಮ ಮಂದಿರ ಪಾವಿತ್ರ್ಯ ಹಾಳಾಗಿದೆ. ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರವನ್ನು ಪವಿತ್ರಗೊಳಿಸಿ, ರಾಮ್ ದರ್ಬಾರ್ ಆರಂಭಿಸುತ್ತೇವೆ ಎಂದು ನಾನಾ ಪಟೋಲ್ ಹೇಳಿದ್ದಾರೆ.
ಮಂದಿರದಲ್ಲಿರುವುದು ರಾಮನ ವಿಗ್ರಹವಲ್ಲ, ಅದು ಬಾಲ ರಾಮನ ವಿಗ್ರಹ. ಆಯೋಧ್ಯೆ ರಾಮ ಮಂದಿರದಲ್ಲಿ ಹಲವು ಪುನರುಜ್ಜೀವನ ಕಾರ್ಯಕ್ರಮಗಳನ್ನು ನಾವು ಕೈಗೊಳ್ಳುತ್ತೇವೆ ಎಂದು ನಾನಾ ಪಟೋಲ್ ಹೇಳಿದ್ದಾರೆ.
ಇತ್ತ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷನ ಹೇಳಿಕೆಗಳು ಭಾರಿ ವಿವಾದಕ್ಕೆ ಕಾರಣವಾಗಿದೆ.ನಿರ್ಮಾಣಹಂತದಿಂದ ರಾಮ ಮಂದಿರದಲ್ಲಿ ಪಾವಿತ್ರ್ಯತೆ ಕಾಪಾಡಿಕೊಳ್ಳಲಾಗಿದೆ. ರಾಮ ಮಂದಿರ ನಿರ್ಮಾಣ,ರಾಮ ಲಲಾ ವಿಗ್ರಹ ಕೆತ್ತನೆ, ಪ್ರತಿಷ್ಠಾಪನೆ ಸೇರಿದಂತೆ ಎಲ್ಲಾ ವಿಚಾರದಲ್ಲೂ ಅಷ್ಟೇ ಪಾವಿತ್ರ್ಯತೆ ಕಾಪಾಡಲಾಗಿದೆ. ಇದೀಗ ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ರಾಮ ಮಂದಿರ ಕುರಿತು ಅವಹೇಳನ ಮಾಡುವುದು, ಪದ್ಧತಿ, ಅಚಾರ ವಿಚಾರಗಳನ್ನು ಹೀಗಳೆಯುವುದು ಸರಿಯಲ್ಲ ಎಂದು ರಾಮ ಭಕ್ತರು ವಾಗ್ದಾಳಿ ನಡೆಸಿದ್ದಾರೆ.