ಮೊದಲ ಮಗುವಿನ ನಿರೀಕ್ಷೆಯಲ್ಲಿ ರಣವೀರ್​ ದಂಪತಿ: ಡೆಲಿವರಿ ಡೇಟ್​ ಅನೌನ್ಸ್​ ಮಾಡಿದ ದೀಪಿಕಾ ಪಡುಕೋಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್​ ನಟಿ ದೀಪಿಕಾ ಮತ್ತು ರಣವೀರ್​ ಸಿಂಗ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈ ಜೋಡಿ, 25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿತ್ತು. ಮದುವೆಯಾಗಿ ಸುಮಾರು 5 ವರ್ಷಗಳಾದರೂ ಈ ಜೋಡಿ ಮಗುವಿನ ಬಗ್ಗೆ ಮಾತನಾಡಿರಲಿಲ್ಲ. ಅವರು ತಮ್ಮ ಕೆರಿಯರ್ ಮೇಲೆ ಫೋಕಸ್ ಮಾಡಿದ್ದರು. ಆದ್ರೆ ಇದೀಗ ಮಗುವಿನ ಸುದ್ದಿ ನೀಡಿದ್ದಾರೆ.

ಇದೇ ಮೊದಲ ಬಾರಿಗೆ ಅಧಿಕೃತವಾಗಿ ಈ ವಿಷಯವನ್ನು ಖುದ್ದು ದೀಪಿಕಾ ತಿಳಿಸಿದ್ದಾರೆ. ಜೊತೆಗೆ ತಮ್ಮ ಡೆಲವರಿ ಯಾವಾಗ ಎಂದೂ ಹೇಳಿದ್ದಾರೆ.
ಬರುವ ಸೆಪ್ಟೆಂಬರ್​ ತಿಂಗಳಿನಲ್ಲಿ ಮಗು ಹುಟ್ಟುತ್ತಿರುವುದಾಗಿ ದೀಪಿಕಾ ಪಡುಕೋಣೆ ಬಹಿರಂಗಪಡಿಸಿದ್ದಾರೆ. ನಟಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಣೆಯನ್ನು ಮಾಡಿದ್ದು, ನಾನು ಗರ್ಭಿಣಿಯಾಗಿದ್ದೇನೆ ಮತ್ತು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಜನ್ಮ ನೀಡುತ್ತೇನೆ ಎಂದಿದ್ದಾರೆ. ಅವರು “ಸೆಪ್ಟೆಂಬರ್ 2024” ದಿನಾಂಕವನ್ನು ಬರೆದಿರುವ ಸಿಹಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ, ಜೊತೆಗೆ ಮಕ್ಕಳ ಉಡುಪುಗಳ ಗ್ರಾಫಿಕ್ಸ್, ಆಟಿಕೆಗಳು ಮತ್ತು ನೀಲಿ ಮತ್ತು ಗುಲಾಬಿ ಬಣ್ಣದ ಬಲೂನ್‌ಗಳನ್ನು ಇಟ್ಟಿದ್ದಾರೆ.

ಈ ಪೋಸ್ಟ್​ಗೆ ಸಹಸ್ರಾರು ಮಂದಿ ಕಮೆಂಟ್​ ಮಾಡಿ ಶುಭಾಶಯಗಳ ಸುರಿಮಳೆಯನ್ನೇಗೈದಿದ್ದಾರೆ. ವಿಕ್ರಾಂತ್ ಮಾಸ್ಸೆ, ಕೃತಿ ಸನೋನ್, ಕರೀನಾ ಕಪೂರ್ ಖಾನ್, ಶ್ರೇಯಾ ಘೋಷಾಲ್​, ವರುಣ್ ಧವನ್, ಆಲಿಯಾ ಭಟ್, ಮೇಧಾ ಶಂಕ್ರ್ ಮತ್ತು ಆಯುಷ್ಮಾನ್ ಖುರಾನಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!