September 7, 2026
Monday, September 7, 2026
spot_img

‘ಪ್ರಳಯ್’ಗೆ ರೆಡಿಯಾದ ರಣವೀರ್: ಲೀಕ್ ಆದ ಒಂದು ವೀಡಿಯೋಗೆ ಸೋಷಿಯಲ್ ಮೀಡಿಯಾ ಶೇಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್’ ಮತ್ತೆ ‘ಧುರಂಧರ್: ದಿ ರಿವೇಂಜ್’ ಸಿನಿಮಾಗಳ ಮೂಲಕ ಕೋಟಿ ಕೋಟಿ ಬಾಚಿ, ಥಿಯೇಟರ್‌ಗಳಲ್ಲಿ ಧೂಳೆಬ್ಬಿಸಿದ್ದ ರಣವೀರ್ ಸಿಂಗ್ ಈಗ ತಮ್ಮ ಮುಂದಿನ ಬಹುನಿರೀಕ್ಷಿತ ‘ಪ್ರಳಯ್’ ಸಿನಿಮಾದ ಶೂಟಿಂಗ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಸೌತ್ ಬ್ಯೂಟಿ ಕಲ್ಯಾಣಿ ಪ್ರಿಯದರ್ಶನ್ ಕೂಡ ಹೀರೋಯಿನ್ ಆಗಿ ಕಾಣಿಸಿಕೊಳ್ತಿದ್ದಾರೆ. ಹೀಗಿರುವಾಗಲೇ, ಶೂಟಿಂಗ್ ಸೆಟ್‌ನಿಂದ ಒಂದಷ್ಟು ವಿಡಿಯೋ ಮತ್ತೆ ಫೋಟೋಗಳು ಲೀಕ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿವೆ.

ವೈರಲ್ ಆಗ್ತಿರೋ ವಿಡಿಯೋದಲ್ಲಿ ರಣವೀರ್ ಸಿಂಗ್ ಒಬ್ಬ ಪುಟ್ಟ ಮಗುವನ್ನ ಬೆನ್ನಿನ್ಮೇಲೆ ಹೊತ್ತುಕೊಂಡು ಹೋಗ್ತಿದ್ರೆ, ಪಕ್ಕದಲ್ಲೇ ಕಲ್ಯಾಣಿ ಪ್ರಿಯದರ್ಶನ್ ನಡ್ಕೊಂಡು ಬರ್ತಿದ್ದಾರೆ. ರಣವೀರ್ ಅವರ ಸಿಗ್ನೇಚರ್ ಲಾಂಗ್ ಹೇರ್ ಲುಕ್ ನೋಡಿದ ತಕ್ಷಣ ಫ್ಯಾನ್ಸ್‌ಗೆ ‘ಧುರಂಧರ್’ ಸಿನಿಮಾದ ಹಮ್ಜಾ ಕ್ಯಾರೆಕ್ಟರ್ ನೆನಪಾಗ್ತಿದೆ.

ಈ ವಿಡಿಯೋ ನೋಡಿ ರಣವೀರ್ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. “ಬಾಸ್ ಲುಕ್ ಮಾತ್ರ ನೆಕ್ಸ್ಟ್ ಲೆವೆಲ್‌ನಲ್ಲಿದೆ”, “ಇದು ‘ದಿ ಲಾಸ್ಟ್ ಆಫ್ ಅಸ್’ ಗೇಮ್‌ನಂತೆಯೇ ಇದೆ” ಎಂದು ಕಾಮೆಂಟ್ ಮಾಡ್ತಿದ್ದಾರೆ. ಇನ್ನು ಕೆಲವರು “ಹಮ್ಜಾ ಹೇರ್‌ಸ್ಟೈಲ್ ಕಂಟಿನ್ಯೂ ಮಾಡಿರೋದು ಸಖತ್ ಆಗಿದೆ, ಆದ್ರೆ ಬಾಡಿ ಲಾಂಗ್ವೇಜ್ ಮಾತ್ರ ಪಕ್ಕಾ ಬೇರೆನೇ ಇದೆ” ಎಂದು ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.

ರಣವೀರ್ ಅವರ ‘ಧುರಂಧರ್: ದಿ ರಿವೇಂಜ್’ ಸಿನಿಮಾ ಬೊಂಬಾಟ್ ಕಲೆಕ್ಷನ್ ಮಾಡಿ ಬಾಲಿವುಡ್‌ನಲ್ಲಿ ಸಾವಿರ ಕೋಟಿ ದಾಟಿದ ಮೊದಲ ಸಿನಿಮಾ ಎಂದು ದಾಖಲೆ ಬರೆದಿತ್ತು. ಈಗ ‘ಪ್ರಳಯ್’ ಶೂಟಿಂಗ್ ವಿಡಿಯೋ ಲೀಕ್ ನೋಡ್ತಿದ್ರೆ, ಈ ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ಹೊಸ ಪ್ರಳಯವನ್ನೇ ಸೃಷ್ಟಿಸೋ ಲಕ್ಷಣ ಕಾಣಿಸ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !