ಒಡಿಶಾದ ಕಾಡುಗಳಲ್ಲಿ ಸಂಚರಿಸುತ್ತಿರುವ ಅಪರೂಪದ ಕಪ್ಪು ಹುಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎಲ್ಲರೂ ಸಾಮಾನ್ಯವಾಗಿ ತಿಳಿ ಹಳದಿ ಬಣ್ಣದ ಹುಲಿಗಳನ್ನು ನೋಡಿರುತ್ತಾರೆ. ಆದರೆ ಕಪ್ಪು ಬಣ್ಣದ ಅಪರೂಪದ ಹುಲಿಯನ್ನು ಕಂಡಿದ್ದೀರಾ? ಒಡಿಶಾದ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪದ ಕಪ್ಪು ಹುಲಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇವುಗಳನ್ನು ಮೆಲನಿಸ್ಟಿಕ್ ಹುಲಿಗಳು ಎಂದು ಕರೆಯಲಾಗುತ್ತದೆ. ಅವು ಸಾಮಾನ್ಯ ಹುಲಿಗಳಿಗಿಂತ ಭಿನ್ನವಾಗಿ ದೇಹದ ಮೇಲೆ ಕಪ್ಪು ಪಟ್ಟೆಗಳನ್ನು ಹೊಂದಿರುತ್ತವೆ.

ಸುಶಾಂತ ನಂದಾ ಎಂಬ ಅರಣ್ಯಾಧಿಕಾರಿ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಹುಲಿಯೊಂದು ಮರ ಹತ್ತಲು ಪ್ರಯತ್ನಿಸುತ್ತಿರುವ ದೃಶ್ಯವಿದೆ. ಈ ಮೆಲನಿಸ್ಟಿಕ್ ಹುಲಿಗಳ ಕಪ್ಪು ಪಟ್ಟೆಗಳ ಹಿಂದಿನ ಕಾರಣ ಎರಡು ವಿಭಿನ್ನ ಜಾತಿಯ ಹುಲಿಗಳ ಸಮ್ಮಿಲನ ಎಂದು ಹೇಳಲಾಗುತ್ತದೆ. ಇವು ವಿಶಿಷ್ಟವಾದ ಕಪ್ಪು ಮತ್ತು ಕಿತ್ತಳೆ ಬಣ್ಣದ ಬಣ್ಣವನ್ನು ಹೊಂದಿರುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!