ಮೀನುಗಾರರ ಬಲೆಗೆ ಬಿದ್ದ ಅಪರೂಪದ ಹಾರುವ ಮೀನುಗಳು!

ದಿಗಂತ ವರದಿ ಮಂಗಳೂರು:

ಮೀನುಗಳ ಬಗ್ಗೆ ನೀವು ಕೇಳಿಬರಬಹುದು, ಆದರೆ ಹಾರುವ ಮೀನುಗಳ ಬಗ್ಗೆ ಕೇಳಿದ್ದೀರಾ?
ಬಲು ಅಪರೂಪದ ಹಾರುವ ಮೀನುಗಳು ಮಂಗಳೂರಿನಲ್ಲಿ ಮೀನುಗಾರರ ಬಲೆಗೆ ಬಿದ್ದಿವೆ. `ಫ್ಲೆಯಿಂಗ್ ಫಿಶ್’ ಎಂದೇ ಗುರುತಿಸಲ್ಪಡುವ ಎರಡು ಮೀನುಗಳು ಬಲೆಗೆ ಬಿದ್ದಿದ್ದು, ನೋಡುಗರಲ್ಲಿ ಕುತೂಹಲ ಹೆಚ್ಚಿಸಿದೆ. ಆಳ ಸಮುದ್ರ ಮೀನುಗಾರಿಕೆ ನಡೆಸಿ ಮೀನುಗಾರಿಕಾ ದಕ್ಕೆಗೆ ಆಗಮಿಸಿದ ಬೋಟ್‌ನಲ್ಲಿದ್ದ ಮೀನಿನ ರಾಶಿಯಲ್ಲಿ ಈ ಮೀನುಗಳು ಪತ್ತೆಯಾಗಿವೆ.
ತುಳು ಭಾಷೆಯಲ್ಲಿ `ಪಕ್ಕಿ ಮೀನ್’ ಎಂದು ಈ ಮೀನುಗಳನ್ನು ಕರೆಯಲಾಗುತ್ತದೆ. ಹಾರುವ ಮೀನು ಹೆಚ್ಚಾಗಿ ಆಳ ಸಮುದ್ರದಲ್ಲಿರುವಂತಹ ಮತ್ಸ್ಯ ಪ್ರಭೇದ. ಇವುಗಳಿಗೆ ಹಕ್ಕಿಯಂತೆಯೇ ರೆಕ್ಕೆಗಳಿರುತ್ತವೆ. ರೆಕ್ಕೆ ಹಾಗೂ ದೇಹದ ಎಲುಬುಗಳ ಭಿನ್ನ ರಚನೆಯಿಂದ ನೀರಿನಿಂದ ಮೇಲೆ ಎಗರಿ ಕೆಲ ಹೊತ್ತು ಹಕ್ಕಿಗಳಂತೆಯೇ ಹಾರುವ ಸಾಮರ್ಥ್ಯ ಹೊಂದಿವೆ ಎನ್ನುತ್ತಾರೆ ಮೀನುಗಾರ ಲೋಕೇಶ್ ಬೆಂಗ್ರೆ.
೧೫ರಿಂದ ೪೫ ಸೆಂ.ಮೀ.ವರೆಗೆ ಉದ್ದವಾಗಿರುವ ಈ ಮೀನುಗಳು ಬಲೆಗೆ ಬೀಳುವುದು ಅಪರೂಪ. ಇತರ ಮೀನುಗಳಿಗೆ ಹೋಲಿಸಿದರೆ ಹಾರುವ ಮೀನುಗಳು ಹೆಚ್ಚು ರುಚಿಕರವಾಗಿರುತ್ತದೆ. ಆದರೆ, ಅದನ್ನೇ ಹಿಡಿಯುವ ಕ್ರಮ ಈ ಭಾಗದಲ್ಲಿ ಕಡಿಮೆ ಎನ್ನುತ್ತಾರೆ ಲೋಕೇಶ್ ಬೆಂಗ್ರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!