October 10, 2026
Saturday, October 10, 2026
spot_img

CINE | ಟ್ರೋಲ್‌ ಮಾಡೋರಿಗೆ ಅವಾರ್ಡ್‌ ಮೂಲಕ ಉತ್ತರ ಕೊಟ್ಟ ರಶ್ಮಿಕಾ ಮಂದಣ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ ಮದುವೆಯ ನಂತರವೂ ಮತ್ತೆ ಟ್ರೋಲ್‌ ಆಗಿದ್ದರು. ರಶ್ಮಿಕಾ ತಾಯಿ ರಕ್ಷಿತ್‌ ಹಾಗೂ ರಶ್ಮಿಕಾ ನಡುವಿನ ಎಂಗೇಜ್ಮೆಂಟ್‌ ಕ್ಯಾನ್ಸಲ್‌ ಆದ ಬಗ್ಗೆ ಮಾತನಾಡಿದ್ದರು. ಇದೀಗ ರಶ್ಮಿಕಾ ತಮ್ಮ ಅವಾರ್ಡ್‌ ಮೂಲಕ ಜನರಿಗೆ ಉತ್ತರ ನೀಡಿದ್ದಾರೆ.

ತೆಲಂಗಾಣ ಗದ್ದರ್ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 19 ರಂದು ಹೈದರಾಬಾದ್ ಹೈಟೆಕ್ಸ್‌ನಲ್ಲಿ ಯುಗಾದಿಯ ಸಂದರ್ಭದಲ್ಲಿ ಅದ್ಧೂರಿಯಾಗಿ ನಡೆಯಿತು. 2025 ರ ವರ್ಷದ ಗದ್ದರ್ ಪ್ರಶಸ್ತಿಗಳನ್ನು ಇತ್ತೀಚೆಗೆ ಘೋಷಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು, ಚಲನಚಿತ್ರ ಮತ್ತು ರಾಜಕೀಯ ವ್ಯಕ್ತಿಗಳು ಭಾಗವಹಿಸಿದ್ದರು. ಇಲ್ಲಿ ರಶ್ಮಿಕಾ ತಮ್ಮ ನಟನೆಗಾಗಿ ಮೊದಲ ಅವಾರ್ಡ್‌ನ್ನು ಪಡೆದಿದ್ದಾರೆ.

‘ದಿ ಗರ್ಲ್‌ಫ್ರೆಂಡ್’ ಚಿತ್ರಕ್ಕಾಗಿ ರಶ್ಮಿಕಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಪ್ರಶಸ್ತಿ ಸ್ವೀಕರಿಸಲು ರಶ್ಮಿಕಾ ತಮ್ಮ ಅತ್ತೆ ಮತ್ತು ವಿಜಯ್ ದೇವರಕೊಂಡ ಅವರ ತಾಯಿಯೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ್ದರು. ರಶ್ಮಿಕಾ ಸಿಎಂ ರೇವಂತ್ ರೆಡ್ಡಿ ಮತ್ತು ರಾಮ್ ಚರಣ್ ಅವರಿಂದ ಪ್ರಶಸ್ತಿ ಪಡೆದರು.

ನಂತರ ಮಾತನಾಡಿ, ಇವತ್ತು ಒಂದು ಮಾತು ಹೇಳೇ ಹೇಳ್ತೀನಿ. ನನ್ನ ಆಕ್ಟಿಂಗ್‌ಗೆ ನಾನು ಟ್ರೋಲ್‌ ಆಗಿದ್ದೆ, ನನ್ನ ನಟನೆಯನ್ನು ನೋಡಿ ಆಕ್ಸೆಂಟ್‌ ಚೆನ್ನಾಗಿಲ್ಲ. ಎಮೋಷನ್ಸ್‌ ಇಲ್ಲ ಎಂದು ಜನ ಹೇಳಿದ್ದರು. ಆದರೆ ಇಂದು ನನ್ನ ನಟನೆಗೆ ನಾನು ಅವಾರ್ಡ್‌ ಪಡೆದಿದ್ದೀನಿ. ನನಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಅದು ಗರ್ಲ್‌ಫ್ರೆಂಡ್‌ ಸಿನಿಮಾಗೆ, ಇದು ತುಂಬಾ ಖುಷಿಯಾದ ದಿನ ರಾಹುಲ್‌ಗೆ ಥ್ಯಾಂಕ್ಸ್‌ ಹೇಳ್ತೀನಿ ಎಂದಿದ್ದಾರೆ.

Must Read