Wednesday, November 30, 2022

Latest Posts

ʼರಾವಣನ ಮೂಲ ಲಂಕೆ ಅಲ್ಲ, ಉತ್ತರ ಭಾರತʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರಾಮಾಯಣ ಚರಿತ್ರೆಯಲ್ಲಿ ಬರುವ ದಶಕಂಠ ರಾವಣನ ಬಗ್ಗೆ ಕೇಳಿಯೇ ಇರುತ್ತೀರಿ. ಇಂದಿಗೂ ಕೂಡ ದೇಶದ ಕೆಲವೆಡೆ ಆತನ ಪ್ರತಿಕೃತಿ ದಹಿಸಿ ಅದನ್ನು ಹಬ್ಬವಾಘಿ ಆಚರಣೆ ಮಾಡಲಾಗುತ್ತದೆ. ಈ ರಾವಣನ ಹುಟ್ಟಿನ ಕುರಿತಾಗಿಯೂ ಕೆಲವೊಮ್ಮೆ ಚರ್ಚೆಗಳಾಗುತ್ತಿರುತ್ತವೆ. ಆತನ ಸಾಮ್ರಾಜ್ಯವಿದ್ದದ್ದು ಲಂಕೆಯಲ್ಲಾದರೂ ಆತ ಭಾರತದವನು ಎಂಬ ವಿಷಯ ನಿಮಗೆ ತಿಳಿದಿದೆಯಾ? ಪ್ರಖ್ಯಾತ ಲೇಖಕ ಅಮೀಶ್‌ ತ್ರಿಪಾಠಿ ಹೀಗೊಂದು ಸತ್ಯವನ್ನು ಹೊರಹಾಕಿದ್ದಾರೆ.

ʼಮೇಲೂಹದ ಮೃತ್ಯುಂಜಯʼ, ʼನಾಗಾರಹಸ್ಯʼ, ʼವಾಯುಪುತ್ರರ ಶಪಥʼ, ʼಇಕ್ಷ್ವಾಕು ಕುಲತಿಲಕʼ ಮುಂತಾದ ಪ್ರಸಿದ್ಧ ಪುಸ್ತಕಗಳ ಲೇಖಕರಾದ ಅಮೀಶ್‌ ತ್ರಿಪಾಠಿ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಲಂಕೆಯ ರಾವಣನ ಮೂಲದ ಬಗ್ಗೆ ಚರ್ಚಿಸಿದ್ದಾರೆ. ಆತ ಲಂಕೆಯಮೂಲದನಲ್ಲ. ಆತನ ಮೂಲ ಉತ್ತರಭಾರತದ ದೆಹಲಿ ಎಂದು ಅವರು ಹೇಳಿದ್ದಾರೆ.

“ಅನೇಕ ಆಧುನಿಕ ಭಾರತೀಯರು ರಾವಣ ತಮಿಳಿನವನು ಅಥವಾ ಲಂಕೆಯವನು ಎಂದೇ ಭಾವಿಸುತ್ತಾರೆ. ಆದರೆ ಇದು ಪ್ರಾಚೀನ ಪಠ್ಯಗಳಿಗೆ ಹೊಂದಿಕೆಯಾಗುವುದಿಲ್ಲ. ನೀವು ಪ್ರಾಚೀನ ಗ್ರಂಥಗಳು ಅಥವಾ ಜಾನಪದ ಸಂಪ್ರದಾಯಗಳನ್ನು ಅಧ್ಯಯನ ಮಾಡಿದಾಗ, ರಾವಣನು ದೆಹಲಿಯ ಸಮೀಪದಲ್ಲಿ, ನೋಯ್ಡಾದಿಂದ ಸ್ವಲ್ಪ ಮುಂದೆ ಜನಿಸಿದನು ಎಂದು ತಿಳಿದುಬಂದಿದೆ. ರಾವಣನ ಅತ್ಯಂತ ಪುರಾತನ ದೇವಾಲಯವೊಂದು ಅಲ್ಲಿದೆ. ಅವನು ಲಂಕಾದ ಮೂಲದ ದೊರೆ ಅಲ್ಲ. ಲಂಕೆಯ ಮೂಲ ದೊರೆ ಕುಬೇರ. ರಾವಣನು ಕುಬೇರನನ್ನು ಪದಚ್ಯುತಗೊಳಿಸಿ ಲಂಕಾವನ್ನು ವಶಪಡಿಸಿಕೊಂಡನು” ಎಂದು ರಾವಣನ ಮೂಲದ ಬಗ್ಗೆ ವಿವರನೆ ಕೊಡುತ್ತಾರೆ ಲೇಖಕ ಅಮೀಶ್‌ ತ್ರಿಪಾಠಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!