ಸೀಕ್ರೆಟ್‌ ಆಗಿ ಎರಡನೇ ಮದುವೆ ಆಗಿದ್ರಾ ರವಿ ಕಿಶನ್‌? ಯಾರೀ ಅಪರ್ಣಾ ಠಾಕೂರ್‌??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಖ್ಯಾತ ನಟ ಹಾಗೂ ರಾಜಕಾರಣಿ ರವಿ ಕಿಶನ್​ ವಿರುದ್ಧ ಅಪರ್ಣಾ ಠಾಕೂರ್‌ ಎಂಬ ಮಹಿಳೆಯೊಬ್ಬರು ಗಂಭೀರವಾದ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯೊಂದನ್ನು ನಡೆಸಿ ರವಿ ಕಿಶನ್‌ ನನ್ನ ಗಂಡ ಎಂದು ಹೇಳಿಕೊಂಡಿದ್ದಾರೆ. ನಮಗೆ ಮಗಳಿದ್ದಾಳೆ ಆದರೆ ರವಿ ಕಿಶನ್‌ ಮಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಅಪರ್ಣಾ ದೂರಿದ್ದಾರೆ.

ಲಖನೌನಲ್ಲಿ ನಾನು ನನ್ನ ಮಗಳು ಶೆನೋವಾ ವಾಸವಿದ್ದೇವೆ, ನನ್ನ ಮಗಳ ಹಕ್ಕಿಗಾಗಿ ನಾನು ಈ ಸುದ್ದಿಗೋಷ್ಠಿ ಕರೆದಿದ್ದೇನೆ. ನಾನು ನ್ಯಾಯಾಲದ ಮೆಟ್ಟಿಲು ಏರುತ್ತಿದ್ದೇನೆ. ಕಾನೂನಿನ ಮೇಲೆ ನನಗೆ ನಂಬಿಕೆ ಇದೆ. ನನ್ನ ಜೊತೆ ಇದ್ದಾಗ ಮಗಳು ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಸಾರ್ವಜನಿಕವಾಗಿ ಅವರು ಒಪ್ಪಿಕೊಳ್ಳುತ್ತಿಲ್ಲ ಎಂದು ಅಪರ್ಣಾ ಠಾಕೂರ್​ ಆರೋಪಿಸಿದ್ದಾರೆ.

ಕುಟುಂಬದವರು ಮತ್ತು ಸ್ನೇಹಿತರ ಎದುರಿನಲ್ಲಿ ರವಿ ಕಿಶನ್​ ನನಗೆ ಸಿಂಧೂರ ಇಟ್ಟಿದ್ದಾರೆ ಹಾಗೂ ತಾಳಿ ಕಟ್ಟಿದ್ದಾರೆ. ಮುಂಬೈನಲ್ಲಿ 1996ರಲ್ಲೇ ನಮ್ಮ ಮದುವೆ ಆಗಿತ್ತು. ನಾನು, ಅವರು ಮತ್ತು ಮಗಳು ಜೊತೆಯಾಗಿ ಇರುವ ಫೋಟೋಗಳು ಇವೆ. ಅವರ ತಂದೆ-ತಾಯಿ ಜೊತೆಗಿನ ವಿಡಿಯೋ ಕೂಡ ಇದೆ. ಮಗಳನ್ನು ಈಗ ಅವರು ದೂರ ಇಟ್ಟಿದ್ದಾರೆ. ಅವರಿಂದ ಯಾವುದೇ ಸಹಾಯ ಸಿಗುತ್ತಿಲ್ಲ. ಜಗತ್ತಿನ ಮುಂದೆ ಮಗಳು ಎಂದು ಒಪ್ಪಿಕೊಳ್ಳಬೇಕು ಅಥವಾ ಕಾನೂನಿನ ಪ್ರಕಾರ ದತ್ತು ಪಡೆಯಬೇಕು ಎಂದು ಅಪರ್ಣಾ ಠಾಕೂರ್​ ಒತ್ತಾಯಿಸಿದ್ದಾರೆ.

ಇತ್ತ ರವಿ ಕಿಶನ್‌ ಪತ್ನಿ ಪ್ರೀತಿ ಶುಕ್ಲಾ ಅಪರ್ಣ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!