ಆರ್‌ಸಿಬಿ ಮಹಿಳಾ ತಂಡದ ಸಲಹೆಗಾರರಾಗಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕುತೂಹಲಕಾರಿ ಬೆಳವಣಿಗೆಯಾಗಿ ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಅವಧಿಗೆ ಮುಂಚೆಯೇ ಸಾನಿಯಾ ಮಿರ್ಜಾ ಅವರನ್ನು ಆರ್‌ಸಿಬಿ(ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು) ಮಹಿಳಾ ತಂಡಕ್ಕೆ ಮಾರ್ಗದರ್ಶಕರನ್ನಾಗಿ ನೇಮಿಸಲಾಗಿದೆ.  ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಮೆಂಟರ್ ಆಗಿ ಭಾರತದ ಟೆನಿಸ್ ಐಕಾನ್ ಸಾನಿಯಾ ಮಿರ್ಜಾ ನೇಮಕಗೊಂಡಿದ್ದಾರೆ. ಆರ್‌ಸಿಬಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ಮಹಿಳೆಯರಿಗಾಗಿ ಭಾರತೀಯ ಕ್ರೀಡೆಗಳಲ್ಲಿ ಮುಂಚೂಣಿ ಕ್ರೀಡಾಪಟು, ಯೂತ್ ಐಕಾನ್, ವೃತ್ತಿಜೀವನದುದ್ದಕ್ಕೂ ಧೈರ್ಯಶಾಲಿ ಮತ್ತು ಎಲ್ಲ ಅಡೆತಡೆಗಳನ್ನು ಮೀರಿ ಆಟವಾಡಿದ ಆಟಗಾರ್ತಿ, ಮೈದಾನದ ಒಳಗೂ ಹೊರಗೂ ಚಾಂಪಿಯನ್ ಆದ ಸಾನಿಯಾ ಮಿರ್ಜಾ ಅವರನ್ನು ಆರ್‌ಸಿಬಿ ಮಹಿಳಾ ಕ್ರಿಕೆಟ್ ತಂಡದ ಸಲಹೆಗಾರರಾಗಿ ಸ್ವಾಗತಿಸಲು ನಾವು ಹೆಮ್ಮೆಪಡುತ್ತೇವೆ’ ಎಂದು ಆರ್‌ಸಿಬಿ ಬರೆದುಕೊಂಡಿದೆ.

ಈ ಕುರಿತು ಮಾತನಾಡಿದ ಸಾನಿಯಾ, “ನನಗೆ ಸ್ವಲ್ಪ ಆಶ್ಚರ್ಯವಾದರೂ ಬಹಳ ಉತ್ಸುಕಳಾಗಿದ್ದೇನೆ. ಅದೃಷ್ಟವಶಾತ್ ನಾನು 20 ವರ್ಷಗಳಿಂದ ವೃತ್ತಿಪರ ಅಥ್ಲೀಟ್ ಆಗಿದ್ದೇನೆ. ನನ್ನ ಮುಂದಿನ ಕೆಲಸ ಯುವತಿಯರಿಗೆ ಕ್ರೀಡೆಯು ವೃತ್ತಿಜೀವನದ ಮೊದಲ ಆಯ್ಕೆಗಳಲ್ಲಿ ಒಂದು ಎಂಬುದನ್ನು ತಿಲಿಹೇಳು ಪ್ರಯತ್ನಿಸಿ ಅವರಿಗೆ ಸಹಾಯ ಮಾಡುವುದು”ಎಂದರು.

ಒತ್ತಡವನ್ನು ನಿಭಾಯಿಸುವುದು ಯಾವುದೇ ಕ್ರೀಡೆಯಲ್ಲಿ ಪ್ರಮುಖವಾದ ಅಂಶ ಅದನ್ನು ಆಟಗಾರರೊಂದಿಗೆ ಅವರ ಮಾನಸಿಕ ವಿಚಾರದಲ್ಲಿ ಕೆಲಸ ಮಾಡುವುದಾಗಿ ಮಿರ್ಜಾ ಹೇಳಿದ್ದಾರೆ.

ಫೆಬ್ರವರಿ 13 ರಂದು ನಡೆದ ಪ್ರೀಮಿಯರ್‌ ಲೀಗ್‌ನ ಮೊದಲ ಹರಾಜಿನಲ್ಲಿ ಆರ್‌ಸಿಬಿ ತಂಡ ಸ್ಮೃತಿ ಮಂದಾನ ಅವರಿಗೆ, ₹3.4 ಕೋಟಿ ಕೊಟ್ಟು ಖರೀದಿಸಿ ಇತಿಹಾಸ ನಿರ್ಮಿಸಿದರು. ಸೋಪಿಯಾ ಡಿವೈನ್, ರೇಣುಕಾ ಸಿಂಗ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್ ಮುಂತಾದ ಆಟಗಾರರು ತಂಡದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!