September 19, 2026
Saturday, September 19, 2026
spot_img

ʼಆರ್‌ಸಿಬಿ ರೆಡ್‌ ಫ್ಲಾಗ್‌ ಇನ್ನಷ್ಟು ಎತ್ತರಕ್ಕೆ ಹಾರುತ್ತಿದೆʼ ನಮ್ಮ ಹುಡುಗಿಯರಿಗೆ ಕಂಗ್ರಾಟ್ಸ್‌ ಎಂದ ಕೊಹ್ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗುರುವಾರ ರಾತ್ರಿ ನಡೆದ ಮಹಿಳೆಯರ ಪ್ರೀಮಿಯರ್ ಲೀಗ್ ಫೈನಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವುಮೆನ್ಸ್‌ ತಂಡ ಎರಡನೇ ಬಾರಿಗೆ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದೆ. ವನಿತೆಯರ ಖುಷಿಗೆ ವಿರಾಟ್‌ ಕೊಹ್ಲಿ ಕಂಗ್ರಾಟ್ಸ್‌ ಎಂದಿದ್ದಾರೆ.

ಇನ್ಸ್ಟಾಗ್ರಾಮ್‌ನಲ್ಲಿ ವಿರಾಟ್‌ ಪೋಸ್ಟ್‌ವೊಂದನ್ನು ಮಾಡಿದ್ದಾರೆ. ಮತ್ತೆ ಚಾಂಪಿಯನ್ಸ್‌ ಆಗಿದ್ದೀರಿ, ನಮ್ಮ ಆರ್‌ಸಿಬಿಯ ರೆಡ್ ಫ್ಲಾಗ್‌ ಇನ್ನಷ್ಟು ಮೇಲೆ ಹೋಗಿದೆ. ಈ ಕೆಲಸ ಆಗಿದ್ದು ನಿಮ್ಮಿಂದ, ನಿಮ್ಮ ಇಡೀ ತಂಡದ ಬಗ್ಗೆ ನಮಗೆ ಹೆಮ್ಮೆಯಿದೆ.

ಸ್ಮೃತಿ ಮಂಧಾನಾ ಹಾಗೂ ಫುಲ್‌ ಟೀಂ ನಿಮ್ಮ ಶ್ರಮಕ್ಕೆ, ಗೆಲುವಿಗೆ ಹ್ಯಾಟ್ಸ್‌ ಆಫ್‌. ಬಿಗ್‌ ಬಿಗ್‌ ಕಂಗ್ರಾಜುಲೇಷನ್ಸ್‌, ಇದೊಂದು ಅದ್ಭುತ ಗೆಲುವು. ಈ ಗೆಲುವನ್ನು ನೀವು ಡಿಸರ್ವ್‌ ಮಾಡುತ್ತೀರಿ. ಒಂದು ಕ್ಷಣವನ್ನೂ ಮಿಸ್‌ ಮಾಡಿಕೊಳ್ಳಬೇಡಿ. ಸಿಕ್ಕಾಪಟ್ಟೆ ಎಂಜಾಯ್‌ ಮಾಡಿ. ನಮ್ಮ ಬೆಂಗಳೂರು ಫ್ಯಾನ್ಸ್‌ ನೀಡುವ ಪ್ರೀತಿಯನ್ನು ಅಪ್ಪಿಕೊಳ್ಳಿ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !