ಬೆಂಗಳೂರು ಮುಳುಗಲು ಶಾಸಕ, ಸಂಸದರ ರಿಯಲ್​ ಎಸ್ಟೇಟ್​ ಉದ್ಯಮ ಕಾರಣ: ನಟಿ, ಮಾಜಿ ಸಂಸದೆ ರಮ್ಯಾ ಆಕ್ರೋಶ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಬೆಂಗಳೂರು ಸೇರಿದಂತೆ ಹಲವು ನಗರಗಳು ಮುಳುಗಿ ಹೋಗಿವೆ. ಇದೀಗ ಬೆಂಗಳೂರಿನ ಆವಾಂತರಗಳ ಬಗ್ಗೆ ನಟಿ, ಮಾಜಿ ಸಂಸದೆ ರಮ್ಯಾ ಕಿಡಿ ಕಾರಿದ್ದಾರೆ.

ಬೆಂಗಳೂರು ದಿನೇ ದಿನೇ ಮುಳುಗಲು ಕಾರಣ ಎಂಎಲ್​ಎಗಳು ಹಾಗೂ ಎಂಪಿಗಳೇ ಎಂದು ಮಾಜಿ ಸಂಸದೆ ಟ್ವೀಟ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆಯಿಂದ ಸೃಷ್ಟಿ ಆಗಿರೋ ಅವಾಂತರಕ್ಕೆ ಶಾಸಕರು ಹಾಗೂ ಜನಪ್ರತಿನಿಧಿಗಳೇ ಕಾರಣ, ಅವರ ರಿಯಲ್​ ಎಸ್ಟೇಟ್​ ಬಿಜಿನೆಸ್ಸೇ ಕಾರಣ ಎಂದು ರಮ್ಯಾ ಟ್ವೀಟ್​ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮ ಮಿತಿಮೀರಿದೆ. ಕರ್ನಾಟಕದಲ್ಲಿ ಎಷ್ಟು ಮಂದಿ ಎಂಎಲ್‌ಎ ಹಾಗೂ ಎಂಪಿಗಳು ರಿಯಲ್‌ ಎಸ್ಟೇಟ್ ಉದ್ಯಮ ಮಾಡುತ್ತಿದ್ದಾರೆ. 28 ಮಂದಿ ಶಾಸಕರಲ್ಲಿ 26 ಮಂದಿ ಬಳಿ ರಿಯಲ್‌ ಎಸ್ಟೇಟ್ ಬಿಜಿನೆಸ್​ ಇದೆಯಂತೆ. ಈ ಬಗ್ಗೆ ನನಗೆ ಯಾರೋ ಹೇಳಿದ್ದಾರೆ ಎಂದು ಹೇಳಿದ್ದಾರೆ.

ರಾಜಕೀಯದಲ್ಲಿ ದುಡ್ಡಿದ್ದವರಿಗೆ, ರಿಯಲ್ ಎಸ್ಟೇಟ್​ನಲ್ಲಿದ್ದವರಿಗೆ ಟಿಕೆಟ್ ಸಿಕ್ತಿದೆ. ಶಾಸಕ ಸ್ಥಾನಕ್ಕೆ ಸ್ಪರ್ಧಿಸೋರು 40 ಲಕ್ಷ ಖರ್ಚು ಮಾಡಲು ಅವಕಾಶ ಇದೆ. ಆದರೆ ಒಬ್ಬೊಬ್ಬರೂ ಕೋಟಿ ಕೋಟಿ ಖರ್ಚು ಮಾಡಿ ಶಾಸಕರಾಗುತ್ತಿದ್ದಾರೆ ಎಂದು ಮಾಜಿ ಸಂಸದೆ ಕಿಡಿ ಕಾರಿದ್ದಾರೆ.

ಈ 26 ರಿಯಲ್‌ ಎಸ್ಟೇಟ್ ಎಂಎಲ್‌ಎಗಳನ್ನು ಆಯ್ಕೆ ಮಾಡಿದ್ದು ಜನರೇ ಅಲ್ಲವೆ . ಈ ಬಾರಿ ಮತ ಚಲಾಯಿಸುವಾಗ ಸರಿಯಾಗಿ ಯೋಚನೆ ಮಾಡಿ ಎಂದಿದ್ದಾರೆ. ಮೊದಲು ಮತ ಚಲಾಯಿಸಿ, ಹೀಗೆ ಮತ ಚಲಾಯಿಸುವಾಗ ಯೋಚನೆ ಮಾಡಿ, ಕೆಲವರು ಮತವನ್ನೇ ಚಲಾಯಿಸುವುದಿಲ್ಲ. ಅದರಲ್ಲೂ ನಗರ ಪ್ರದೇಶಗಳಲ್ಲಿ ಹೆಚ್ಚಿನ ಜನರು ವೋಟ್ ಮಾಡುವುದಿಲ್ಲ. ಆ ಮೇಲೆ ಜನಪ್ರತಿನಿಧಿಗಳನ್ನು ದೂಷಿಸಿದರೆ ಪ್ರಯೋಜನ ಇಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!