Saturday, January 28, 2023

Latest Posts

RECIPE| ರುಚಿ ರುಚಿಯಾಗಿ ಹೀಗೆ ಮಾಡಿ ರೋಸ್ ಮಸಾಲಾ ಚಾಯ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಪದಾರ್ಥಗಳು:

ಹಾಲು: ಒಂದು ಲೋಟ
ಸಕ್ಕರೆ: ಒಂದು ಚಮಚ
ಗುಲಾಬಿ ದಳ; ನಾಲ್ಕು
ಟೀ ಪುಡಿ: ಎರಡು ಚಮಚ
ದಾಲ್ಚಿನ್ನಿ ಪುಡಿ: ಚಿಟಿಕೆ
ಏಲಕ್ಕಿ:ಎರಡು
ಜೇನುತುಪ್ಪ: ಒಂದು ಚಮಚ

ಮಾಡುವ ವಿಧಾನ: 

ಮೊದಲಿಗೆ ಒಂದು ಪಾತ್ರೆಯಲ್ಲಿ ಹಾಲಿಟ್ಟು ಅದನ್ನು ಬಿಸಿಯಾಗಲು ಬಿಡಿ ಈಗ ಅದಕ್ಕೆ ಒಣ ಗುಲಾಬಿ ದಳ, ಎರಡು ಚಮಚ ಟೀ ಪುಡಿ, ಸಕ್ಕರೆ ಒಂದು ಚಿಟಿಕೆ ದಾಲ್ಚಿನ್ನಿ ಪುಡಿ ಮತ್ತು ಎರಡು ಏಲಕ್ಕಿ ಸೇರಿಸಿ ಚೆನ್ನಾಗಿ ಕುದಿಸಿ. ಕುದಿಸಿದ ನಂತರ ಸೋಸಿದ ಚಹಾಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಮಿಕ್ಸ್‌ ಮಾಡಿದ್ರೆ ಮುಗೀತು ರೋಸ್‌ ಮಸಾಲಾ ಚಾಯ್‌ ರೆಡಿ. ನಡುಗುವ ಚಳಿಯಲ್ಲಿ ಈ ಟೀ ಕುಡಿಯುವುದರಿಂದ ದೇಹದಲ್ಲಿ ಶಾಖ ಉತ್ಪತ್ತಿಯಾಗುತ್ತದೆ. ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!