ಅಕ್ಕ ಮಹಾದೇವಿ ಮಹಿಳಾ ವಿವಿಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ?

ದಿಗಂತ ವರದಿ ವಿಜಯಪುರ:

ನಗರ ಹೊರ ಭಾಗ ತೊರವಿ ಬಳಿಯ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿ ಬಂದಿದೆ.

ವಿವಿಯ ಪ್ರೊಫೆಸರ್ ರಿಂದ ಪಿಎಚ್’ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ತಿಳಿದು ಬಂದಿದೆ.

ಮಹಿಳಾ ವಿವಿಯ ಮ್ಯಾನೇಜ್ಮೆಂಟ್ ವಿಭಾಗದ ಮಲ್ಲಿಕಾರ್ಜುನ ಎನ್. ಎಲ್. ಅವರಿಂದ ಪಿಎಚ್’ಡಿ ಅಧ್ಯಯನ ಮಾಡುತ್ತಿರುವ ಓರ್ವ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಸಂಬಂಧ ನೊಂದ ವಿದ್ಯಾರ್ಥಿನಿ ಮಹಿಳಾ ವಿವಿ ಕುಲಪತಿ ಪ್ರೊ. ತುಳಸಿಮಾಲ ಅವರಿಗೆ ದೂರು ನೀಡಿದ್ದಾರೆ.

ಕಳೆದ‌ ಫೆ. 27 ರಂದು ವಿದ್ಯಾರ್ಥಿನಿ ನೀಡಿರುವ ದೂರಿನ ವಿಚಾರವನ್ನು ಕುಲಪತಿ ಪ್ರೊ. ತುಳಸಿಮಾಲ ಯುಜಿಸಿ‌ ನಿಯಮಗಳ‌ ಪ್ರಕಾರ ಆಂತರಿಕ ದೂರು ಸಮಿತಿಗೆ ಸಲ್ಲಿಸಿದ್ದಾರೆ. ಆಂತರಿಕ ದೂರು ಸಮಿತಿಯಿಂದ ಈ ಕುರಿತು ವಿಚಾರಣೆ ನಡೆಯಲಿರುವ ದಿನಾಂಕ ನಿಗದಿಯಾಗಿಲ್ಲ. ಮ್ಯಾನೇಜ್ಮೆಂಟ್ ವಿಭಾಗದ ಮಲ್ಲಿಕಾರ್ಜುನ ಎನ್.ಎಲ್. ಕಳೆದ 2017 ರಿಂದ ಮಹಿಳಾ ವಿವಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಪ್ರಕರಣ ಕುರಿತು ವಿದ್ಯಾರ್ಥಿನಿಗೆ‌ ನ್ಯಾಯ ನೀಡಬೇಕೆಂದು ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!