ಸಾಮಾಗ್ರಿಗಳು
ಹೆಸರುಕಾಳು
ಬದನೆಕಾಯಿ
ಆಲೂಗಡ್ಡೆ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಶುಂಠಿ
ಬೆಳ್ಳುಳ್ಳಿ
ಜೀರಿಗೆ
ಸಾಂಬಾರ್ ಪುಡಿ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಹಾಗೂ ಜೀರಿಗೆ ಹಾಕಿ ಮಿಕ್ಸಿ ಮಾಡಿ.
ನಂತರ ಒಗ್ಗರಣೆಗೆ ಎಣ್ಣೆ, ಜೀರಿಗೆ, ಸಾಸಿವೆ ಹಾಕಿ.
ನಂತರ ಅದಕ್ಕೆ ಈರುಳ್ಳಿ, ಮಿಕ್ಸಿ ಮಾಡಿದ ಮಸಾಲಾ ಹಾಕಿ.
ಹಸಿ ವಾಸನೆ ಹೋದ ನಂತರ ಟೊಮ್ಯಾಟೊ ಹಾಕಿ.
ನಂತರ ಸಾಂಬಾರ್ ಪುಡಿ ಹಾಕಿ
ನಂತರ ಕಾಳುಗಳು, ತರಕಾರಿ ಹಾಕಿ.
ಉಪ್ಪು ನೀರು ಹಾಕಿ ಕುಕ್ಕರ್ ಕೂಗಿಸಿದರೆ ಪಲ್ಯ ರೆಡಿ