ಮಾ.9 ರಂದು ಕಷ್ಟ ಭಂಜನ ಹನುಮಾನ ದೇವಸ್ಥಾನ, ಗೋಶಾಲೆಯ 3ನೇ ವಾರ್ಷಿಕೋತ್ಸವ ಸಮಾರಂಭ

ದಿಗಂತ ವರದಿ ಹುಬ್ಬಳ್ಳಿ:

ವಿಶ್ವ ಹಿಂದೂ ಪರಿಷತ್ ಉತ್ತರ ಕರ್ನಾಟಕ ಟ್ರಸ್ಟ್‌ ವತಿಯಿಂದ ಆನಂದ ನಗರದ ಕಷ್ಟ ಭಂಜನ ಹನುಮಾನ ದೇವಸ್ಥಾನ ಮತ್ತು ಗೋಶಾಲೆಯ ಮೂರನೇ ವಾರ್ಷಿಕೋತ್ಸವದ ಸಮಾರಂಭ ಮಾ. 9 ರಂದು ಸಂಜೆ 6 ಕ್ಕೆ ಅಭಿನವ ನಗರದ ಗೋಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ವಿನಾಯಕ ಕಂಗೇರಿ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾರಂಭದ ಸಾನಿಧ್ಯ ಹಳೆ ಹುಬ್ಬಳ್ಳಿ ನೀಲಕಂಠ ಮಠದ ಪರಮ ಪೂಜ್ಯ ಜಗದ್ಗುರು ಶ್ರೀ ೧೦೦೮ ಶಿವ ಶಂಕರ ಶಿವಾಚಾರ್ಯ ಮಹಸ್ವಾಮಿ ವಹಿಸುವರು. ಅಧ್ಯಕ್ಷತೆ ವಿಶ್ವ ಹಿಂದೂ ಪರಿಷತ್ ಪ್ರಾಂತ ಅಧ್ಯಕ್ಷ ಡಾ. ಎಸ್ ಆರ್ ರಾಮನಗೌಡ, ಮುಖ್ಯ ಅತಿಥಿಯಾಗಿ ಶ್ರೀ ಮಹಾವೀರ ಕುಂದೂರ, ವಕ್ತಾರರಾಗಿ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಮನೋಹರ ಮಠದ್, ಉಪಸ್ಥಿತಿ ಪ್ರಾಂತ ಕಾರ್ಯದರ್ಶಿ ಕೆ. ಗೋವರ್ಧನ ರಾವ್ ಭಾಗವಹಿಸುವರು. ಮಹಾನಗರ ಕಾರ್ಯದರ್ಶಿ ರಮೇಶ ಕದಂ, ಸುಭಾಷ್ ಡಂಖ್, ಶರಣಯ್ಯ ಹಿರೇಮಠ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!