March 16, 2026
Monday, March 16, 2026
spot_img

Relationship | ಫಸ್ಟ್ ಟೈಮ್ ಪ್ರೀತಿಯಲ್ಲಿ ಬಿದ್ದಿದ್ದೀರಾ? ಹಾಗಿದ್ರೆ ಈ ವಿಷ್ಯ ನೆನಪಿನಲ್ಲಿರಲಿ!

ಮೊದಲ ಪ್ರೀತಿ ಎಂದರೆ ಮನಸ್ಸಿಗೆ ಹೊಸ ಅನುಭವ. ಪ್ರತಿಯೊಂದು ಮಾತು, ಮೆಸೇಜ್, ಭೇಟಿಯೂ ಸ್ಪೆಷಲ್ ಅನ್ನಿಸೋ ಸಮಯ ಅದು. ಆದರೆ ಈ ಹಂತದಲ್ಲಿ ಭಾವನೆಗಳ ಜೊತೆ ಸ್ವಲ್ಪ ಅರಿವೂ ಇರೋದು ಮುಖ್ಯ. ಪ್ರೀತಿಯಲ್ಲಿ ಮುಳುಗಿರುವಾಗ ನಮ್ಮನ್ನು ನಾವು ಮರೆಯಬಾರದು ಅನ್ನೋದು ನೆನಪಿರಲಿ.

ಪ್ರೀತಿ ಮುಖ್ಯ, ಆದರೆ ನಿಮ್ಮ ಕನಸು, ಗುರಿ ಮತ್ತು ಸ್ವಾಭಿಮಾನ ಇನ್ನೂ ಮುಖ್ಯ. ನಿಮ್ಮ ಜೀವನವನ್ನ ಸಂಪೂರ್ಣವಾಗಿ ಒಬ್ಬರ ಸುತ್ತ ಮಾತ್ರ ತಿರುಗಿಸಬೇಡಿ.

ಮೊದಲ ಪ್ರೀತಿಯಲ್ಲಿ ಎಲ್ಲವೂ ಸಿನಿಮಾದಂತೆ ಇರಬೇಕು ಅನ್ನೋ ನಿರೀಕ್ಷೆ ಇರುತ್ತೆ. ಆದರೆ ನಿಜ ಜೀವನದಲ್ಲಿ ಅರ್ಥ ಮಾಡಿಕೊಳ್ಳೋದು ಮುಖ್ಯ.

ಸಣ್ಣ ವಿಷಯಗಳನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೇ, ಓಪನ್ ಆಗಿ ಮಾತನಾಡಿದ್ರೆ ಸಂಬಂಧ ಗಟ್ಟಿಯಾಗುತ್ತೆ.

ಇದನ್ನೂ ಓದಿ:

ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳೋಕೆ ಸಮಯ ಬೇಕು. ಎಲ್ಲವೂ ಬೇಗ ಆಗಬೇಕು ಅಂತ ಅರ್ಜೆಂಟ್ ಮಾಡ್ಬೇಡಿ.

ಮೊದಲ ಪ್ರೀತಿ ಒಂದು ಸುಂದರ ನೆನಪು. ಅದನ್ನು ಜಾಗರೂಕತೆಯಿಂದ ಅನುಭವಿಸಿದರೆ ಮಾತ್ರ ಅದು ಜೀವನದ ಒಳ್ಳೆಯ ಭಾಗವಾಗಿ ಕೊನೆಯತನಕ ಉಳಿಯುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !