Tuesday, March 28, 2023

Latest Posts

ಫ್ಲಿಪ್​ಕಾರ್ಟ್​​ಗೆ ರಿಲೀಫ್: 1,100 ಕೋಟಿ ಪಾವತಿ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇ-ಕಾಮರ್ಸ್ ಕಂಪನಿ ಫ್ಲಿಪ್​ಕಾರ್ಟ್​​ಗೆ (Flipkart) ಕರ್ನಾಟಕ ಹೈಕೋರ್ಟ್​​ನಿಂದ (Karnataka High Court) ಬುಧವಾರ ರಿಲೀಫ್ ದೊರೆತಿದೆ.

ಆದಾಯ ತೆರಿಗೆ ಇಲಾಖೆಗೆ 1,100 ಕೋಟಿ ರೂ. ಬಾಕಿ ಪಾವತಿಸುವ ವಿಚಾರದಲ್ಲಿ ಜನವರಿ 31ರಂದು ಆದಾಯ ತೆರಿಗೆ ಆಯುಕ್ತರು ನೀಡಿರುವ ತೀರ್ಪಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಮುಂದಿನ ವಿಚಾರಣೆಯನ್ನು ಫೆಬ್ರವರಿ 24ಕ್ಕೆ ನಿಗದಿಪಡಿಸಲಾಗಿದೆ. ಅಲ್ಲಿಯವರೆಗೂ ಫ್ಲಿಪ್​ಕಾರ್ಟ್​ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್​ ಸೂಚಿಸಿದೆ.

2016-17 ಹಾಗೂ 2018-19ನೇ ತೆರಿಗೆ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಆದಾಯ ತೆರಿಗೆ ಆಯುಕ್ತರು ನೀಡಿರುವ ತೀರ್ಪಿನ ವಿರುದ್ಧ ಫ್ಲಿಪ್​ಕಾರ್ಟ್​ ಕರ್ನಾಟಕ ಹೈಕೋರ್ಟ್​​ಗೆ ರಿಟ್ ಅರ್ಜಿ ಸಲ್ಲಿಸಿತ್ತು.

4,500 ಕೋಟಿ ರೂ. ಮತ್ತು 180 ಕೋಟಿ ರೂ. ಮೊತ್ತದಲ್ಲಿ ಎಂಪ್ಲಾಯೀಸ್ ಸ್ಟಾಕ್ ಓನರ್​ಶಿಪ್ ಪ್ಲಾನ್​ (ESOP) ಗೆ ಅನುಮತಿಸದಿರುವುದನ್ನು ಮತ್ತು ಅಮೂರ್ತ ವಸ್ತುಗಳ ಬಂಡವಾಳೀಕರಣಕ್ಕೆ ಸಂಬಂಧಿಸಿ ತನ್ನ ವಿರುದ್ಧ ತೀರ್ಪು ನೀಡಿದ್ದನ್ನು ಪ್ರಶ್ನಿಸಿ ಕಂಪನಿ ರಿಟ್ ಅರ್ಜಿ ಸಲ್ಲಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!