ಹೊಸದಿಗಂತ ವರದಿ, ಗೋಕರ್ಣ :
ಸಮುದ್ರದ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ವಿದೇಶಿ ಪ್ರವಾಸಿಗನ ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಗುರುವಾರ ಸಂಜೆ ಕುಡ್ಲೆ ಬೀಚ್‍ನಲ್ಲಿ ನಡೆದಿದೆ.
ಖಜಕಿಸ್ತಾನ ದೇಶದ ತಲಗಟ್ (60) ಜೀವಾಪಾಯದಿಂದ ಪಾರಾಗಿ ಬಂದ ಪ್ರವಾಸಗನಾಗಿದ್ದಾನೆ. ಒಟ್ಟು ಐದು ಜನ ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದು, ಸಮುದ್ರದಲ್ಲಿ ಈಜಾಡಲು ತೆರಳಿದ ವೇಳೆ ಅಘಡ ನಡೆದಿದೆ. ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುವ ಸ್ಥಿತಿಯಲ್ಲಿದ್ದನ್ನು ಗಮನಿಸಿದ ಕರ್ತವ್ಯ ನಿರತ ಜೀವರಕ್ಷಕ ಸಿಬ್ಬಂದಿಗಳಾದ ನಾಗೇಂದ್ರ ಎಸ್.ಕುರ್ಲೆ,ಪ್ರವಾಸಿ ಮಿತ್ರ ರಘುವೀರ ತಕ್ಷಣ ರಕ್ಷಣೆಗೆ ಧಾವಿಸಿದ್ದು ರಕ್ಷಣೆ ಮಾಡಿದ್ದಾರೆ. ಇವರಿಗೆ ಮೈಸ್ಟಿಕ್ ಅಡ್ವೇಂಚರ್ಸ ಸಿಬ್ಬಂದಿಗಳಾದ ರೋಹನ, ಜೆಸ್ಕಿ ಚಾಲಕ ಪ್ರಕಾಶ ಸಹಾಯ ಮಾಡಿದ್ದಾರೆ